ಉಳ್ಳಾಲ: ಅಪಾಯದ ಸ್ಥಿತಿಯಲ್ಲಿ ಹಡಗಿನಲ್ಲಿದ್ದ 15 ವಿದೇಶಿಗರ ರಕ್ಷಣೆ

ಮಂಗಳೂರು : ಉಳ್ಳಾಲದಿಂದ ಐದಾರು ನಾಟಿಕಲ್ ಮೈಲ್ ದೂರದ ಸಮುದ್ರದಲ್ಲಿ ಸಿಲುಕಿದ ಹಡಗಿನಲ್ಲಿದ್ದ ಸಿರಿಯಾ ದೇಶದ 15 ಮಂದಿಯನ್ನು ಕೋಸ್ಟ್ ಗಾರ್ಡ್ ಸಿಬ್ಬಂದಿ ವರ್ಗವು ಮಂಗಳವಾರ ರಕ್ಷಿಸಿದೆ.
ಎಂ.ವಿ. ಪ್ರಿನ್ಸೆಸ್ ಮಿರಾಲ್ ಎಂಬ ಹೆಸರಿನ ಹಡಗು ಸಮುದ್ರದಲ್ಲಿ ಅಪಾಯದ ಸ್ಥಿತಿಯಲ್ಲಿರುವ ಬಗ್ಗೆ ಮಾಹಿತಿ ಪಡೆದ ಕೋಸ್ಟ್‌ಗಾರ್ಡ್ ಅಧಿಕಾರಿಗಳು ತಕ್ಷಣ ಸಿಬ್ಬಂದಿ ವರ್ಗದೊಂದಿಗೆ ಸ್ಥಳಕ್ಕೆ ಧಾವಿಸಿ ಹಡಗಿನಲ್ಲಿ ಅಪಾಯದ ಸ್ಥಿತಿಯಲ್ಲಿದ್ದ 15 ಮಂದಿ ಸಿರಿಯನ್ ಪ್ರಜೆಗಳನ್ನು ಪಾರು ಮಾಡಿದ್ದಾರೆ.
ಈ ಹಡಗಿನಲ್ಲಿ 8 ಸಾವಿರ ಟನ್ ಸ್ಟೀಲ್ ಕೊಯಿಲ್ ಹೇರಿಕೊಂಡು ಬರುತ್ತಿದ್ದಾಗ ಹಡಗಿನೊಳಗೆ ನೀರು ಬರಲಾರಂಭಿಸಿದ್ದನ್ನು ಗಮನಿಸಿದ ಹಡಗಿನ ಕ್ಯಾಪ್ಟನ್ ಕೋಸ್ಟ್‌ಗಾರ್ಡ್‌ಗೆ ಮಾಹಿತಿ ನೀಡಿದರು. ಅದರಂತೆ 15 ಮಂದಿಯನ್ನು ರಕ್ಷಿಸಲಾಗಿದೆ.