ಪಂಜಾಬ್ನ ಮಾಜಿ ಡಿಜಿಪಿ ದಿನಕರ್ ಗುಪ್ತಾ ಎನ್ಐಎ ನೂತನ ವರಿಷ್ಠರಾಗಿ ಆಯ್ಕೆ

ದಿನಕರ್ ಗುಪ್ತಾ
ಚಂಡಿಗಢ, ಜೂ. 23: ಪಂಜಾಬ್ನ ಮಾಜಿ ಡಿಜಿಪಿ ಹಾಗೂ 1987ರ ಬ್ಯಾಚ್ನ ಐಪಿಎಸ್ ಅಧಿಕಾರಿ ದಿನಕರ್ ಗುಪ್ತಾ ಅವರು ರಾಷ್ಟ್ರೀಯ ಭದ್ರತಾ ಸಂಸ್ಥೆ (ಎನ್ಐಎ)ಯ ನೂತನ ವರಿಷ್ಠರಾಗಿ ನೇಮಕರಾಗಿದ್ದಾರೆ.
ಈ ಹುದ್ದೆಯಿಂದ ನಿವೃತ್ತವಾಗಲಿರುವ ೨೦೨೪ ಮಾರ್ಚ್ ೩೧ರ ವರೆಗೆ ಅಥವಾ ಸರಕಾರದ ಮುಂದಿನ ಆದೇಶದ ವರೆಗೆ ಗುಪ್ತಾ ಅವರು ಅಧಿಕಾರದಲ್ಲಿ ಇರಲಿದ್ದಾರೆ.
ರಾಷ್ಟ್ರೀಯ ತನಿಖಾ ಸಂಸ್ಥೆಯ ಪ್ರಧಾನ ನಿರ್ದೇಶಕರನ್ನಾಗಿ ದಿನಕರ್ ಗುಪ್ತಾ ಅವರನ್ನು ನಿಯೋಜಿಸುವ ಕುರಿತ ಗೃಹ ವ್ಯವಹಾರಗಳ ಸಚಿವಾಲಯ ಸಲ್ಲಿಸಿದ ಪ್ರಸ್ತಾವಕ್ಕೆ ಸಂಪುಟದ ನೇಮಕಾತಿ ಸಮಿತಿ ಅನುಮೋದನೆ ನೀಡಿದೆ ಎಂದು ಆದೇಶ ತಿಳಿಸಿದೆ.
Next Story