ಅಸ್ಸಾಂ ಪ್ರವಾಹ ಪರಿಸ್ಥಿತಿ ಗಂಭೀರ: ಮೃತಪಟ್ಟವರ ಸಂಖ್ಯೆ 107ಕ್ಕೆ ಏರಿಕೆ

Photo:India Today
ಗುವಾಹಟಿ: ಕಳೆದ 24 ಗಂಟೆಗಳಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಇನ್ನೂ ಏಳು ಜನರು ಸಾವನ್ನಪ್ಪುವ ಮೂಲಕ ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಗಂಭೀರವಾಗಿದೆ. ರಾಜ್ಯದಲ್ಲಿ ಮಹಾಮಳೆ ಅಪ್ಪಳಿಸಿದ್ದು, ಮೃತರ ಸಂಖ್ಯೆ 107ಕ್ಕೆ ತಲುಪಿದೆ. ಭೂಕುಸಿತದಲ್ಲಿ 17 ಮಂದಿ ಸಾವನ್ನಪ್ಪಿದ್ದಾರೆ.
ಕ್ಯಾಚಾರ್ ಹಾಗೂ ಬರ್ಪೇಟಾದಿಂದ ತಲಾ ಇಬ್ಬರು ಮತ್ತು ಧುಬ್ರಿ ಹಾಗೂ ಹೊಸದಾಗಿ ರಚಿಸಲಾದ ಬಜಾಲಿ ಮತ್ತು ತಮುಲ್ಪುರ್ ಜಿಲ್ಲೆಗಳಿಂದ ತಲಾ ಒಬ್ಬರು ಮಹಾಮಳೆಗೆ ಸಾವನ್ನಪ್ಪಿದ್ದಾರೆ. ಒಟ್ಟು 4,536 ಗ್ರಾಮಗಳು ಇನ್ನೂ ಪ್ರವಾಹದ ನೀರಿನಲ್ಲಿ ತತ್ತರಿಸಿವೆ. ಬಾರ್ಪೇಟಾ ಅತ್ಯಂತ ಹೆಚ್ಚು ಹಾನಿಗೊಳಗಾದ ಜಿಲ್ಲೆಯಾಗಿದ್ದು, 10.32 ಲಕ್ಷಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ, ನಂತರದ ಸ್ಥಾನದಲ್ಲಿನಾಗಾಂವ್ ಜಿಲ್ಲೆ ಇದ್ದು, ಇಲ್ಲಿ 5.03 ಲಕ್ಷಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ.
ಎಲ್ಲಾ 30 ಪೀಡಿತ ಜಿಲ್ಲೆಗಳಲ್ಲಿ ಆಯಾ ಜಿಲ್ಲಾಡಳಿತಗಳು ಸ್ಥಾಪಿಸಿರುವ 759 ಪರಿಹಾರ ಶಿಬಿರಗಳಲ್ಲಿ ಒಟ್ಟು 2.84 ಲಕ್ಷ ಜನರು ಆಶ್ರಯ ಪಡೆದಿದ್ದಾರೆ. ಧುಬ್ರಿ, ಶಿವಸಾಗರ ಹಾಗೂ ನಾಗಾಂವ್ ಜಿಲ್ಲೆಗಳಲ್ಲಿ ಬ್ರಹ್ಮಪುತ್ರ, ದಿಸಾಂಗ್ ಹಾಗೂ ಕೊಪಿಲಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.
#WATCH असम: नागांव में रोहा क्षेत्र के फुलगुरी के सरकारी विभाग के कार्यालयों, स्कूलों और अस्पतालों के परिसर में बाढ़ का पानी घुसा। (23.06) pic.twitter.com/PE3pgf8ve6
— ANI_HindiNews (@AHindinews) June 23, 2022