ಶಿವಸೇನೆಯ ಬಂಡಾಯ ನಾಯಕ ಏಕನಾಥ್ ಶಿಂಧೆಯಿಂದ ಶಿವಸೇನೆ ಹೆಸರಿನಲ್ಲೇ ಹೊಸ ಪಕ್ಷ ಸಾಧ್ಯತೆ: ವರದಿ

Photo:PTI
ಹೊಸದಿಲ್ಲಿ: ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯದ ನೇತೃತ್ವವಹಿಸಿರುವ ಹಿರಿಯ ಶಿವಸೇನೆ ನಾಯಕ ಏಕನಾಥ್ ಶಿಂಧೆ ಅವರು "ಶಿವಸೇನಾ ಬಾಳಾಸಾಹೇಬ್ ಠಾಕ್ರೆ" ಎಂಬ ಹೊಸ ಪಕ್ಷವನ್ನು ರಚಿಸುವ ಸಾಧ್ಯತೆಯಿದೆ ಎಂದು ಮೂಲಗಳು NDTV ಗೆ ತಿಳಿಸಿವೆ.
ಉದ್ಧವ್ ವಿರುದ್ಧ ಬಂಡಾಯ ಎದ್ದಿರುವ ಏಕನಾಥ ಶಿಂಧೆ ಪ್ರಸ್ತುತ ಗುವಾಹಟಿಯಲ್ಲಿ ಪಂಚತಾರಾ ಹೊಟೇಲ್ ನಲ್ಲಿ 50ಕ್ಕೂ ಅಧಿಕ ಶಾಸಕರೊಂದಿಗೆ ಬೀಡುಬಿಟ್ಟಿದ್ದಾರೆ.
ಶಿಂಧೆ ಅವರಿಗೆ 50 ಕ್ಕೂ ಹೆಚ್ಚು ಶಾಸಕರ ಬೆಂಬಲವಿದೆ ಎಂದು ವರದಿಯಾಗಿದೆ, ಅವರಲ್ಲಿ 40 ಮಂದಿ ಶಿವಸೇನೆ ಶಾಸಕರಾಗಿದ್ದಾರೆ.
Next Story