ಬಜ್ಪೆ ಪಟ್ಟಣ ಪಂಚಾಯತ್ ನಿಂದ ಜನರ ಸುಳಿಗೆ ಆರೋಪ; ಜೂ.27ರಂದು ಪ್ರತಿಭಟನೆ
ಮಂಗಳೂರು: ಬಜ್ಪೆ ಪಟ್ಟಣ ಪಂಚಾಯಿತಿಯಿಂದ ದುಬಾರಿ ಮನೆ ತೆರಿಗೆ, ವಿದ್ಯುತ್ ದರ, ನೀರಿನ ದರ ಹಾಗೂ ಅವೈಜ್ಞಾನಿಕ ಕಸ ವಿಲೇವಾರಿ ವಿರೋಧಿಸಿ ನಾಗರಿಕರು ಪಕ್ಷಾತೀತವಾಗ ಸೋಮವಾರ ಪ್ರತಿಭಟನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ.
ಕಳೆದ ಒಂದುವರೆ ವರ್ಷಗಳಿಂದ ಗ್ರಾಮ ಪಂಚಾಯತ್ ಆಗಿದ್ದ ಬಜಪೆಯನ್ನು ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆ ಗೇರಿಸಲಾಗಿತ್ತು. ಆ ಬಳಿಕ ಗ್ರಾಮಪಂಚಾಯತ್ನ ಆಡಳಿತ ಮಂಡಳಿಯು ವಿಸರ್ಜನೆಗೊಂಡಿತು ಬಳಿಕ ಯಾವುದೇ ಸಮಿತಿಯನ್ನು ರಚನೆ ಮಾಡಲಾಗಿಲ್ಲ. ಸದ್ಯ ಮಂಗಳೂರು ತಹಶೀಲ್ದಾರ್ ಅವರ ನೇತೃತ್ವದಲ್ಲಿ ಅಧಿಕಾರಿಗಳು ರಾಜ್ಯಭಾರ ಮಾಡುತ್ತಾ ದರಗಳನ್ನು ಹೆಚ್ಚಿಸಿ ಜನಸಾಮಾನ್ಯರ ಜೀವನ ನಿರ್ವಹಣೆಗೆ ಕೊಳ್ಳುತ್ತಿದ್ದಾರೆ.
ಬಜ್ಪೆ ಪಟ್ಟಣ ಪಂಚಾಯತ್ ನಲ್ಲಿ ಅಧಿಕಾರಿಗಳ ರಾಜ್ಯಭಾರ ಆರಂಭಗೊಂಡ ಬಳಿಕ ಮನೆ ತೆರಿಗೆ, ವಾಣಿಜ್ಯ ಸಂಕೀರ್ಣಗಳ ತೆರಿಗೆ ಎಚ್ಚರ ಮಾಡಲಾಗಿದೆ. ಅಲ್ಲದೆ, ದೇಶದ ಎಲ್ಲೂ ಇಲ್ಲದ ಮುಂಗಡ ತೆರಿಗೆ ಪಾವತಿಯ ಅವೈಜ್ಞಾನಿಕ ಕ್ರಮಗಳನ್ನು ರೂಪಿಸಲಾಗಿದೆ. ನೀರಿನ ದರವನ್ನು ಹೆಚ್ಚಿಸಲಾಗಿದೆ. ವಿದ್ಯುತ್ ಕನಿಷ್ಠ ದರವನ್ನು 60 ರೂ.ನಿಂದ ನೂರು ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಎಲ್ಲೆಂದರಲ್ಲಿ ತ್ಯಾಜ್ಯಗಳು ತುಂಬಿ ತುಳುಕುತ್ತಿದ್ದು ಪಟ್ಟಣ ಪಂಚಾಯತ್ ಯಾವುದೇ ಕ್ರಮಕ್ಕೆ ಮುಂದಾಗದೇ ಜನರ ಸುಳಿಗೆಗೆ ಮುಂದಾಗಿದೆ ಎಂದು ಆರೋಪಿಸಿ ಸಾರ್ವಜನಿಕರು ಪಕ್ಷಾತೀತರಾಗಿ ಜೂನ್ 27ರ ಸೋಮವಾರ ಬಜ್ಪೆ ಪಟ್ಟಣದ ಕೇಂದ್ರ ಬಸ್ ನಿಲ್ದಾಣದ ಬಳಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ ಎಂದು ಪ್ರತಿಭಟನೆಯ ಆಯೋಜಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







