ಕನ್ನಡ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾಗಿ ಬಿ.ಎಲ್.ಶಂಕರ್ ಪುನರ್ ಆಯ್ಕೆ

ಬೆಂಗಳೂರು, ಜೂ. 26: ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾಗಿ ಡಾ.ಶಂಕರ್ ಬಿ.ಎಲ್. ಅವರು ನಾಲ್ಕನೆ ಬಾರಿಗೆ ಆಯ್ಕೆ ಆಗಿದ್ದಾರೆ.
ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆಗಾಗಿ ರವಿವಾರ ಚುನಾವಣೆ ನಡೆದು ಫಲಿತಾಂಶ ಪ್ರಕಟವಾಗಿದೆ. 2022-23ರಿಂದ 2024-25ನೆ ಸಾಲಿನವರೆಗೆ ಪದಾಧಿಕಾರಿಗಳು ಆಯ್ಕೆ ಆಗಿದ್ದಾರೆ.
ಉಪಾಧ್ಯಕ್ಷರಾಗಿ ಪ್ರೊ. ಕೆ.ಎಸ್.ಅಪ್ಪಾಜಯ್ಯ, ಪ್ರಭಾಕರ್ ಟಿ., ಎ.ರಾಮಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಶಶಿಧರ್ ಎಸ್.ಎನ್., ಸಹಾಯಕ ಕಾರ್ಯದರ್ಶಿಯಾಗಿ ಟಿ.ಚಂದ್ರಶೇಖರ್, ಬಿ.ಎಲ್.ಶ್ರೀನಿವಾಸ, ಖಜಾಂಚಿಯಾಗಿ ಡಾ.ಲಕ್ಷ್ಮೀಪತಿ ಬಾಬು ಎನ್., ಕಾರ್ಯಕಾರಿ ಸಮಿತಿಗೆ ಟಿ.ವಿ.ತಾರಕೇಶ್ವರಿ, ಆರ್.ಜಿ. ಬಂಡಾರಿ, ಸಿ.ಪಿ.ಉಷಾರಾಣಿ, ವಿನೋದಾ ಬಿ.ವೈ., ಸುಬ್ರಮಣ್ಯ ಕುಕ್ಕೆ, ಅಮ್ರಿತ ವಿಮಲನಾಥನ್ ಎಸ್., ಪಿ. ದಿನೇಶ್ ಮಗರ್ ಆಯ್ಕೆ ಆಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Next Story