ರಾಜ್ಯದಲ್ಲಿ ರವಿವಾರ 133 ಮಂದಿಗೆ ಕೊರೋನ ದೃಢ; ಸಾವಿನ ಸಂಖ್ಯೆ ಶೂನ್ಯ
ಬೆಂಗಳೂರು, ಜೂ.26: ರಾಜ್ಯದಲ್ಲಿ ರವಿವಾರ 133 ಹೊಸ ಕೊರೋನ ಪ್ರಕರಣಗಳು ದೃಢವಾಗಿದ್ದು, 517 ಜನರು ಗುಣಮುಖರಾಗಿದ್ದಾರೆ.
ರಾಜ್ಯದಲ್ಲಿ ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 39,64,835ಕ್ಕೆ ತಲುಪಿದೆ. ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 40,072ಕ್ಕೆ ತಲುಪಿದೆ.
ಒಟ್ಟು ಸಕ್ರಿಯ ಕೊರೋನ ಪ್ರಕರಣ ಸಂಖ್ಯೆ 4,438ಕ್ಕೆ ಏರಿಕೆಯಾಗಿದ್ದು, ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.
ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ ಹೊಸದಾಗಿ 133 ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಳ್ಳಾರಿ 1, ಬೆಂಗಳೂರುನಗರ 131, ಉಡುಪಿ ಜಿಲ್ಲೆಯಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ.
ರಾಜಧಾನಿಯಲ್ಲಿ 131 ಜನರಿಗೆ ಕೊರೋನ ದೃಢ
ರಾಜಧಾನಿಯಲ್ಲಿ ರವಿವಾರದಂದು 131 ಜನರಿಗೆ ಕೊರೋನ ಸೋಂಕು ದೃಢಪಟ್ಟಿದ್ದು, 487 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ನಗರದಲ್ಲಿ ಇಲ್ಲಿಯವರೆಗೆ ಒಟ್ಟು 17,99,823 ಕೊರೋನ ಸೋಂಕಿತರು ದೃಢಪಟ್ಟಿದ್ದು, ಒಟ್ಟು 16,967 ಜನರು ಸೋಂಕಿಗೆ ಬಲಿಯಾಗಿದ್ದಾರೆ.
ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳಲ್ಲಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.