ಭಾರತದ ಪರ ಮೊದಲ ಪಂದ್ಯವನ್ನಾಡುವ ಅವಕಾಶ ಪಡೆದ ಉಮ್ರಾನ್ ಮಲಿಕ್

Photo: twitter
ಡಬ್ಲಿನ್, ಜೂ.26: ಉದಯೋನ್ಮುಖ ವೇಗದ ಬೌಲರ್ ಉಮ್ರಾನ್ ಮಲಿಕ್ ರವಿವಾರ ಐರ್ಲ್ಯಾಂಡ್ ವಿರುದ್ಧದ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಆಡುವ ಅವಕಾಶವನ್ನು ಪಡೆಯುವ ಮೂಲಕ ಅಂತರ್ರಾಷ್ಟ್ರೀಯ ಕ್ರಿಕೆಟಿಗೆ ಕಾಲಿಟ್ಟಿದ್ದಾರೆ.
ಚೊಚ್ಚಲ ಪಂದ್ಯವನ್ನಾಡುತ್ತಿರುವ ಜಮ್ಮು-ಕಾಶ್ಮೀರದ ವೇಗದ ಬೌಲರ್ ಮಲಿಕ್ಗೆ ಹಿರಿಯ ವೇಗಿ ಭುವನೇಶ್ವರ ಕುಮಾರ್ ಭಾರತದ ಕ್ಯಾಪ್ನ್ನು ಹಸ್ತಾಂತರಿಸಿದರು.
ಐರ್ಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತದ ವೇಗದ ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರಕುಮಾರ್, ಅವೇಶ್ಖಾನ್, ಉಮ್ರಾನ್ ಮಲಿಕ್ ಅವರಿದ್ದಾರೆ. ಹಾರ್ದಿಕ್ ಪಾಂಡ್ಯ ಇದೇ ಮೊದಲ ಬಾರಿ ಭಾರತವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ. ಉಮ್ರಾನ್ ಮಲಿಕ್ ಈ ವರ್ಷದ ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ಪರ ಅತ್ಯಂತ ವೇಗವಾಗಿ ಬೌಲಿಂಗ್ ಮಾಡುವ ಮೂಲಕ ವಿಶ್ವದ ಗಮನ ಸೆಳೆದಿದ್ದರು.
ಟಾಸ್ ಜಯಿಸಿದ ಭಾರತ ಮೊದಲು ಬೌಲಿಂಗ್ ಆಯ್ದುಕೊಂಡಿದೆ. ಆದರೆ ಪಂದ್ಯ ಆರಂಭಕ್ಕೆ ಮಳೆ ಅಡ್ಡಿಪಡಿಸಿದೆ.
A dream come true moment!!Congratulations to Umran Malik who is all set to make his T20I debut for #TeamIndia
— BCCI (@BCCI) June 26, 2022
He gets No.98 #IREvIND pic.twitter.com/8JXXsRJFbW