Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. ಪಠ್ಯ ಮರುಪರಿಷ್ಕರಣೆ ವಿವಾದ; ಸಿಎಂ...

ಪಠ್ಯ ಮರುಪರಿಷ್ಕರಣೆ ವಿವಾದ; ಸಿಎಂ ಮಧ್ಯಪ್ರವೇಶಕ್ಕೆ ಹಿಂದುಳಿದ, ದಲಿತ ಮಠಾಧೀಶರ ಒಕ್ಕೂಟದ ಮನವಿ

ವಾರ್ತಾಭಾರತಿವಾರ್ತಾಭಾರತಿ27 Jun 2022 8:09 PM IST
share
ಪಠ್ಯ ಮರುಪರಿಷ್ಕರಣೆ ವಿವಾದ; ಸಿಎಂ ಮಧ್ಯಪ್ರವೇಶಕ್ಕೆ ಹಿಂದುಳಿದ, ದಲಿತ ಮಠಾಧೀಶರ ಒಕ್ಕೂಟದ ಮನವಿ

ಬೆಂಗಳೂರು, ಜೂ. 27: ‘ಪಠ್ಯ ಪುಸ್ತಕ ಪರಿಷ್ಕರಣೆಯಿಂದ ಶಿಕ್ಷಣ ಕ್ಷೇತ್ರದಲ್ಲಿ ವಿವಾದ ಉಂಟಾಗಿ ಕೆಟ್ಟ ಪರಿಣಾಮ ಬೀರುತ್ತಿದೆ. ಹೀಗಾಗಿ ಸಿಎಂ ಕೂಡಲೇ ಮಧ್ಯಪ್ರವೇಶಿಸಿ, ಮರುಪರಿಷ್ಕರಣೆ ಪಠ್ಯವನ್ನು ತಡೆಹಿಡಿಯಬೇಕು. ವಿರೋಧ ವ್ಯಕ್ತಪಡಿಸುವವರ ಅಭಿಪ್ರಾಯವನ್ನು ಆಲಿಸಿ, ವಿವಾದ ಬಗೆಹರಿಸಲು ಕ್ರಮ ವಹಿಸಬೇಕೆಂದು ಕೋರಿ ಹಿಂದುಳಿದ, ದಲಿತ ಮಠಾಧೀಶರ ಒಕ್ಕೂಟ, ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದೆ.

ಸೋಮವಾರ ಇಲ್ಲಿನ ರೇಸ್‍ಕೋರ್ಸ್‍ನಲ್ಲಿರುವ ಸಿಎಂ ನಿವಾಸಕ್ಕೆ ಖುದ್ದು ಭೇಟಿ ನೀಡಿದ ಕನಕ ಗುರು ಪೀಠದ ನಿರಂಜನಾನಂದಪುರಿ, ಭೋವಿ ಗುರು ಪೀಠದ ಇಮ್ಮಡಿ ಸಿದ್ಧರಾಮೇಶ್ವರ ಶ್ರೀಗಳು, ಬಸವ ಮಾಚಿದೇವ ಸ್ವಾಮಿ, ಶಾಂತವೀರಸ್ವಾಮಿ, ಮಾದಾರ ಚನ್ನಯ್ಯ ಸ್ವಾಮಿ ಹಾಗೂ ರೇಣುಕಾನಂದ ಸ್ವಾಮೀಜಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

‘ಬರಗೂರು ನೇತೃತ್ವದ ಸಮಿತಿ ಪಠ್ಯ ಪರಿಷ್ಕರಣೆ ವೇಳೆ 27 ಸಮಿತಿಗಳಿದ್ದು, 172 ಜನ ವಿಷಯ ತಜ್ಞರು ಕೆಲಸ ಮಾಡಿದ್ದಾರೆಂದು ಕೇಳಿದ್ದೇವೆ. ಆದರೆ, ಸದ್ಯ ಮರುಪರಿಷ್ಕರಣೆಗೆ ಒಂದೇ ಸಮಿತಿಯನ್ನು ನೇಮಿಸಿದ್ದು ಅದರಲ್ಲಿ ಒಬ್ಬರ ಹೊರತಾಗಿ ಎಲ್ಲರೂ ಒಂದೇ ಜನಾಂಗಕ್ಕೆ ಸೇರಿದವರೆಂದು ತಿಳಿದುಬಂದಿದ್ದು ಇದು ಅನುಚಿತ. ಪಠ್ಯ ಪರಿಷ್ಕರಣೆ ಮಾಡುವ ವೇಳೆ ವಿಶೇಷವಾಗಿ ಹಿಂದುಳಿದ ವರ್ಗ ಮತ್ತು ದಲಿತ ವರ್ಗದವರಿಗೆ ಅನ್ಯಾಯ ಮಾಡಲಾಗಿದೆ' ಎಂದು ಸ್ವಾಮೀಜಿಗಳು ಆರೋಪಿಸಿದ್ದಾರೆ.

‘ಕನ್ನಡ ಭಾಷಾ ಪಠ್ಯಗಳಿಂದ ಎಲ್ಲ ಹಿಂದುಳಿದ-ದಲಿತ ಬರಹಗಾರರ ಪಾಠಗಳನ್ನು ಕೈಬಿಡಲಾಗಿದ್ದು, ಬಹುಪಾಲು ಲೇಖಕಿಯರ ಪಾಠಗಳನ್ನು ತೆಗೆಯಲಾಗಿದೆ. ಕುವೆಂಪು ಅವರ 10 ಪಾಠ ಹಾಕಿದ್ದು ಸಂತೋಷದ ಸಂಗತಿ. ಹೀಗೆ ಮಾಡುವಾಗ ಹಿಂದುಳಿದ-ದಲಿತ ಬರಹಗಾರರ ಪಾಠಗಳಿಗೆ ಬದಲಾಗಿ ಹಾಕಲಾಗಿದ್ದು ಕುವೆಂಪು ಬದುಕಿದ್ದರೆ ಅವರೇ ಇದನ್ನು ಒಪ್ಪುತ್ತಿರಲಿಲ್ಲ. ಏಕೆಂದರೆ ಕುವೆಂಪು ‘ಸರ್ವಜನಾಂಗದ ಶಾಂತಿಯ ತೋಟ'ದ ಪ್ರತಿಪಾದಕರಾಗಿದ್ದರು. ಕನ್ನಡ ಪಠ್ಯಗಳಲ್ಲಿ ಕುವೆಂಪು ಅವರ 10 ಪಾಠ ಹಾಕಿದ್ದಾಗಿ ಹೇಳುವವರು ಸಮಾಜ ವಿಜ್ಞಾನ ಪಠ್ಯದ ಏಕೀಕರಣ ಕುರಿತ ಪಾಠದಿಂದ ಕುವೆಂಪು ಭಾವಚಿತ್ರವನ್ನೇ ತೆಗೆದು ಹಾಕಿರುವುದು ಖಂಡನೀಯವಲ್ಲವೇ? ಎಂದು ಸ್ವಾಮೀಜಿಗಳು ಪ್ರಶ್ನಿಸಿದ್ದಾರೆ.

‘ಹುಯಿಲಗೋಳ ನಾರಾಯಣರಾಯರು ಮತ್ತು ದಲಿತ ಸಂವೇದನೆಯ ಲೇಖಕ ದೇವನೂರ ಮಹಾದೇವರ ಹಾಗೂ ಮಾಜಿ ಪ್ರಧಾನಿ

ದೇವೆಗೌಡರ ಭಾವಚಿತ್ರಗಳನ್ನು ತೆಗೆದದ್ದು ಖಂಡನೀಯವಲ್ಲವೇ? ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಮತ್ತು ಬುದ್ಧ ಗುರುವಿನ ಬಗ್ಗೆ ಇದ್ದ ಕನ್ನಡ ಪದ್ಯಗಳನ್ನು ಕಿತ್ತು ಹಾಕಲಾಗಿದ್ದು, ಇದು ಸರಿಯೇ? ಸಮಾಜ ವಿಜ್ಞಾನ ಪಠ್ಯಗಳಲ್ಲಿ ಹಿಂದುಳಿದ ಮತ್ತು ದಲಿತ ಸಾಧಕರಿಗೆ ಸಾಕಷ್ಟು ಅನ್ಯಾಯ ಮಾಡಲಾಗಿದೆ. ಅಂಬೇಡ್ಕರ್ ಅವರಿಗಿದ್ದ ‘ಸಂವಿಧಾನ ಶಿಲ್ಪಿ' ಎಂಬ ಬಿರುದು ತೆಗೆಯುವುದರಿಂದ ಆರಂಭವಾಗಿದೆ' ಎಂದು ಅವರುಗಳು ದೂರಿದ್ದಾರೆ.

‘ನಾರಾಯಣ ಗುರು ಮಾತ್ರವಲ್ಲ 7ನೆ ಮತ್ತು 9ನೆ ತರಗತಿಗಳ ಸಮಾಜ ವಿಜ್ಞಾನ ಪಠ್ಯಗಳಲ್ಲಿದ್ದ ಕನಕ ದಾಸರ ಪಾಠವನ್ನು ತೆಗೆದು ಹಾಕಲಾಗಿದೆ. ಕನಕದಾಸರ ಪಾಠದ ಜೊತೆಗಿದ್ದ ಭಕ್ತಿ ಪಂಥದ ಅಕ್ಕಮಹಾದೇವಿ, ಶಿಶುನಾಳ ಶರೀಫ ಮತ್ತು ಪುರಂದರ ದಾಸರ ಪಾಠಗಳಿಗೂ ಪೂರ್ಣ ಕತ್ತರಿ ಹಾಕಲಾಗಿದ್ದು ಇದು ಭಕ್ತಿ ಪರಂಪರೆಗೆ ಮಾಡಿದ ಅನ್ಯಾಯ. ಸಮಾಜ ವಿಜ್ಞಾನದಲ್ಲಿದ್ದ ಸಾವಿತ್ರಿ ಬಾಯಿಫುಲೆ ಪಾಠವನ್ನು ತೆಗೆದು ಹಾಕಿದ್ದು ಇದು ದಲಿತ ಲೋಕದ ಧ್ರುವತಾರೆಗೆ ಮಾಡಿದ ಅನ್ಯಾಯ. ಒಟ್ಟಾರೆ ಪರಿಷ್ಕೃತ ಪಠ್ಯದಲ್ಲಿ ಅವೈದಿಕ ವಲಯದ ವಿಚಾರಗಳನ್ನು ಮತ್ತು ಸಾಧಕರನ್ನು ಕಡೆಗಣಿಸಲಾಗಿದೆ' ಎಂದು ಸ್ವಾಮೀಜಿಗಳು ಆಪಾದಿಸಿದ್ದಾರೆ.

‘ನಾವು ಇಲ್ಲಿ ಪಟ್ಟಿ ಮಾಡಿರುವುದು ಸಾಂಕೇತಿಕ. ಪಠ್ಯ ಮರುಪರಿಷ್ಕರಣೆ ತುಂಬಾ ಅಸಮತೋಲನಕ್ಕೆ ಕಾರಣವಾಗಿರುವುದು ಗೊತ್ತಾಗುತ್ತದೆ. ಹಿಂದುಳಿದ ಮತ್ತು ದಲಿತ ಚೇತನಗಳಿಗೆ ಅನ್ಯಾಯ ಮಾಡಲಾಗಿದೆ. ಸಂವಿಧಾನಾತ್ಮಕ ಸಾಮಾಜಿಕ ನ್ಯಾಯವನ್ನು ಕಡೆಗಣಿಸಲಾಗಿದೆ. ಮರುಪರಿಷ್ಕರಣೆ ಆಕ್ಷೇಪ ಎತ್ತಿದವರ ಮೇಲೆ ಪ್ರತ್ಯಾರೋಪ ಮಾಡುವ ಬದಲು ಪ್ರಜಾಸತ್ತಾತ್ಮಕವಾಗಿ ಪರ್ಯಾಲೋಚನೆ ಮಾಡಬೇಕು. ಹೀಗಾಗಿ ಪಠ್ಯ ಮರು ಪರಿಷ್ಕರಣೆ ಹಿಂಪಡೆಯಬೇಕು' ಎಂದು ಸ್ವಾಮೀಜಿಗಳು, ಸಿಎಂಗೆ ಮನವಿ ಮಾಡಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X