ಮಲ್ಪೆ ಪೊಲೀಸ್ ಠಾಣೆ ಕಂಪೌಂಡ್ಗೆ ಕಾರು ಢಿಕ್ಕಿ
![ಮಲ್ಪೆ ಪೊಲೀಸ್ ಠಾಣೆ ಕಂಪೌಂಡ್ಗೆ ಕಾರು ಢಿಕ್ಕಿ ಮಲ್ಪೆ ಪೊಲೀಸ್ ಠಾಣೆ ಕಂಪೌಂಡ್ಗೆ ಕಾರು ಢಿಕ್ಕಿ](https://www.varthabharati.in/sites/default/files/images/articles/2022/06/27/340401-1656347378.jpg)
ಫೈಲ್ ಫೋಟೊ
ಮಲ್ಪೆ : ಕಾರೊಂದು ಮಲ್ಪೆ ಪೊಲೀಸ್ ಠಾಣೆಯ ಆವರಣ ಗೊಡೆಗೆ ಢಿಕ್ಕಿ ಹೊಡೆದ ಘಟನೆ ಇಂದು ಬೆಳಗ್ಗೆ ನಡೆದಿದ್ದು, ಕಾರು ಚಾಲಕ ಮದ್ಯ ಸೇವಿಸಿರುವುದಾಗಿ ಆರೋಪಿಸಲಾಗಿದೆ.
ವಡಬಾಂಡೇಶ್ವರ ಸರ್ಕಲ್ನಿಂದ ಮಲ್ಪೆ ಬೀಚ್ ಕಡೆಗೆ ಅಮಿತೇಶ್ ಎಂಬಾತ ಚಲಾಯಿಸಿಕೊಂಡು ಬಂದ ಕಾರು, ಚಾಲಕನ ನಿಯಂತ್ರಣ ತಪ್ಪಿ ಪೊಲೀಸ್ ಠಾಣೆ ಎದುರಿನ ಆವರಣ ಗೋಡೆಗೆ ಢಿಕ್ಕಿ ಹೊಡೆದು ಜಖಂಗೊಳಿಸಿ ಸಾರ್ವ ಜನಿಕ ಆಸ್ತಿಗೆ ಹಾನಿ ಮಾಡಿದ್ದಾನೆ. ಚಾಲಕ ಮೇಲ್ನೋಟಕ್ಕೆ ಮದ್ಯ ಸೇವನೆ ಮಾಡಿರುವುದು ಕಂಡುಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕಾರಿನಲ್ಲಿ ಇತರ ಪ್ರಯಾಣಿಕರು ಕೂಡ ಇದ್ದರು. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story