ಕಾಸರಗೋಡು | ವೆಳ್ಳರಿಕುಂಡು ತಾಲೂಕಿನ ಹಲವೆಡೆ ಮತ್ತೆ ಭೂಕಂಪನದ ಅನುಭವ
ವಾರದಲ್ಲಿ 2ನೇ ಬಾರಿ ಕಂಪಿಸಿದ ಭೂಮಿ: ಮನೆಯಿಂದ ಹೊರಗಡೆ ಓಡಿದ ಜನತೆ

ಕಾಸರಗೋಡು, ಜೂ.28: ಜಿಲ್ಲೆಯ ವೆಳ್ಳರಿಕುಂಡು ತಾಲೂಕಿನ ಹಲವೆಡೆ ಇಂದು ಬೆಳಗ್ಗೆ ಮತ್ತೆ ಭೂಮಿ ಕಂಪಿಸಿದ ಅನುಭವ ಆಗಿದೆ.
ತಾಲೂಕಿನ ಪನತ್ತಡಿ ಕಲ್ಲಪಳ್ಳಿ ಪರಿಸರದಲ್ಲಿ ಇಂದು ಬೆಳಗ್ಗೆ 7:45ರ ಸುಮಾರಿಗೆ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದೆ ಎಂದು ಇಲ್ಲಿನ ನಿವಾಸಿಗಳು ತಿಳಿಸಿದ್ದಾರೆ. ಶಬ್ದ ಹಾಗೂ ಕಂಪನದಿಂದ ಹಲವು ಮಂದಿ ಭಯದಿಂದ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.
ಜೂ.25ರಂದು ಉಂಟಾದ ಕಂಪನದ ಶಬ್ದಕ್ಕಿಂತ ಈ ಬಾರಿ ಹೆಚ್ಚಿನ ಸದ್ದು ಕೇಳಿಸಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ವಾರದ ಅವಧಿಯಲ್ಲಿ ಎರಡನೇ ಬಾರಿ ಉಂಟಾದ ಭೂ ಕಂಪನದಿಂದ ಜನತೆ ಆತಂಕಿತರಾಗಿದ್ದಾರೆ.
Next Story





