ರಿಲಾಯನ್ಸ್ ಜಿಯೊ ಅಧ್ಯಕ್ಷರಾಗಿ ಆಕಾಶ್ ಅಂಬಾನಿ ನೇಮಕ
ಹೊಸದಿಲ್ಲಿ, ಜೂ. ೨೮: ಟೆಲಿಕಾಂ ಸಂಸ್ಥೆ ರಿಲಾಯನ್ಸ್ ಜಿಯೋದ ಅಧ್ಯಕ್ಷರಾಗಿದ್ದ ಮುಖೇಶ್ ಅಂಬಾನಿ ತನ್ನ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಆ ಸ್ಥಾನಕ್ಕೆ ತನ್ನ ಪುತ್ರ ಆಕಾಶ್ ಅಂಬಾನಿಯನ್ನು ನೇಮಕ ಮಾಡಿದ್ದಾರೆ.
ಕಾರ್ಯಕಾರಿಣಿಯೇತರ ನಿರ್ದೇಶಕರಾಗಿದ್ದ ಆಕಾಶ್ ಎಂ. ಅಂಬಾನಿ ಅವರನ್ನು ಕಂಪೆನಿಯ ನಿರ್ದೇಶಕರ ಮಂಡಳಿಯ ಅಧ್ಯಕ್ಷರಾಗಿ ನಿಯೋಜಿಸಲು ಮಂಡಳಿ ಅನುಮೋದನೆ ನೀಡಿದೆ ಎಂದು ರಿಲಾಯನ್ಸ್ ಜಿಯೊ ಇನ್ಫೋಕಾಂ ತಿಳಿಸಿದೆ.
Next Story