ಬೆಳೆ ವಿಮೆ ರೈತರ ಅರ್ಜಿ ತಿರಸ್ಕೃತ: ಆಕ್ಷೇಪಣೆ ಆಹ್ವಾನ
ಉಡುಪಿ, ಜೂ.೨೯: ಕೃಷಿ ಇಲಾಖೆ ವತಿಯಿಂದ ೨೦೧೯-೨೦ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕುಂದಾಪುರ ತಾಲೂಕಿನ ಭತ್ತದ ಬೆಳೆಗೆ ಸಂಬಂಧಿಸಿದಂತೆ, ಬೆಳೆವಿಮೆಗೆ ಹೆಸರು ನೋಂದಾಯಿಸಿಕೊಂಡ ರೈತರ ಸಮೀಕ್ಷಾ ವರದಿಗೂ ಹಾಗೂ ರೈತರು ನೀಡಿರುವ ಪಹಣಿ ಪತ್ರಕ್ಕೆ ತಾಳೆಯಾಗದ ಹಿನ್ನೆಲೆಯಲ್ಲಿ ವಿಮಾ ಕಂಪೆನಿಯಿಂದ ರೈತರ ಅರ್ಜಿಗಳು ತಿರಸ್ಕೃತಗೊಂಡಿರುವ ಪಟ್ಟಿಯನ್ನು ಕುಂದಾಪುರ ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಕುಂದಾಪುರ, ಬೈಂದೂರು ಹಾಗೂ ವಂಡ್ಸೆ ರೈತ ಸಂಪರ್ಕ ಕೇಂದ್ರ ಮತ್ತು ಗ್ರಾಮ ಪಂಚಾಯತ್ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದ್ದು, ಈ ಕುರಿತು ಆಕ್ಷೇಪಣೆ ಗಳಿದ್ದಲ್ಲಿ ರೈತರು ಆ ಸಾಲಿನ ಪಹಣಿ ಪತ್ರ ಹಾಗೂ ಆಧಾರ್ ಪತ್ರದೊಂದಿಗೆ ಕುಂದಾಪುರ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ, ಅಹವಾಲು ಗಳನ್ನು ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
Next Story