ಉಡುಪಿ; ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂ. ವಂಚನೆ: ದೂರು

ಉಡುಪಿ: ಕೆವೈಸಿ ಅಪ್ಡೇಟ್ ಮಾಡುವುದಾಗಿ ಹೇಳಿ ಕರೆ ಮಾಡಿದ ವ್ಯಕ್ತಿಯೊಬ್ಬ, ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂ. ಹಣ ಆನ್ ಲೈನ್ ಮೂಲಕ ವರ್ಗಾಯಿಸಿ ವಂಚಿಸಿರುವ ಬಗ್ಗೆ ವರದಿಯಾಗಿದೆ.
ಗಣಪತಿ ಕಾಮತ್ ಎಂಬವರ ಮೊಬೈಲ್ಗೆ ಜೂ.28ರಂದು ನಿಮ್ಮ ಬ್ಯಾಂಕ್ ಖಾತೆ ಬ್ಲಾಕ್ ಆಗಿದ್ದು, ಕೂಡಲೇ ಕೆವೈಸಿ ಅಪ್ಡೇಟ್ ಮಾಡಿಕೊಳ್ಳುವಂತೆ ಸಂದೇಶ ಬಂದಿದ್ದು, ನಂತರ ಬ್ಯಾಂಕ್ ಅಧಿಕಾರಿ ಎಂದು ಹೇಳಿಕೊಂಡು ಕರೆ ಮಾಡಿದ ವ್ಯಕ್ತಿ ಆಧಾರ್ ನಂಬರ್, ಪಾನ್ ಕಾರ್ಡ್ ನಂಬರ್ ಪಡೆದನು.
ಬಳಿಕ ಗಣಪತಿ ಕಾಮತ್ ಮೊಬೈಲ್ಗೆ ಬಂದ ಓಟಿಪಿಯನ್ನು ಕೇಳಿ ಪಡೆದು, ಅವರ ಬ್ಯಾಂಕ್ ಖಾತೆಯಿಂದ ಒಟ್ಟು 1,05,681 ರೂ. ಹಣವನ್ನು ಆನ್ಲೈನ್ ಮೂಲಕ ವರ್ಗಾವಣೆ ಮಾಡಿ ಮೋಸ ಮಾಡಿರುವುದಾಗಿ ದೂರಲಾಗಿದೆ. ಈ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story