ಕಾಪು | ಮಲ್ಲಾರು ಸರಕಾರಿ ಉರ್ದು ಶಾಲೆ ಜಲಾವೃತ

ಕಾಪು, ಜೂ.30: ಕಳೆದ ರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮಲ್ಲಾರು ಸರಕಾರಿ ಸಂಯುಕ್ತ ಉರ್ದು ಶಾಲೆ ಜಲಾವೃತಗೊಂಡಿದೆ
ಶತಮಾನ ಕಂಡ ಶಾಲೆಯ ಹೆಂಚು ಗೋಡೆಗಳಿಗೆ ಹಾನಿಯಾಗಿದ್ದು, ಮಳೆನೀರು ತರಗತಿ ಹಾಗೂ ಕಚೇರಿಗೆ ನುಗ್ಗಿರುವ ಬಗ್ಗೆ ವರದಿಯಾಗಿದೆ.
ಸ್ಥಳಕ್ಕೆ ಪುರಸಭಾ ಸದಸ್ಯ ನೂರುದ್ದೀನ್ ಸೇರಿದಂತೆ ಸ್ಥಳೀಯರು ಆಗಮಿಸಿದ್ದು, ಶ್ರಮದಾನದ ಮೂಲಕ ನೀರು ಹೊರ ಹರಿಸುವ ಕೆಲಸ ಮಾಡುತ್ತಿದ್ದಾರೆ.
Next Story