ಮುಂಬೈ: ಪಾಳುಬಿದ್ದ ಆಸ್ಪತ್ರೆಯಲ್ಲಿ ಸುಸೈಡ್ ನೋಟ್ ನೊಂದಿಗೆ 4 ಮಂದಿಯ ಮೃತದೇಹ ಪತ್ತೆ

Photo:PTI
ಮುಂಬೈ: ಮುಂಬೈನ ಕಾಂದಿವಲಿ ಪ್ರದೇಶದಲ್ಲಿ ಪಾಳುಬಿದ್ದ ಆಸ್ಪತ್ರೆ ಕಟ್ಟಡದಲ್ಲಿ ನಾಲ್ವರು ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರಲ್ಲಿ ಮೂವರು ಕುಟುಂಬ ಸದಸ್ಯರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕುಟುಂಬವು ಪಾಳುಬಿದ್ದ ಆಸ್ಪತ್ರೆಯ ಕಟ್ಟಡದಲ್ಲಿ ವಾಸಿಸುತ್ತಿತ್ತು. 15 ವರ್ಷಗಳ ಹಿಂದೆ ಆಸ್ಪತ್ರೆಯನ್ನು ಮುಚ್ಚಲಾಗಿತ್ತು. ಕಟ್ಟಡದಿಂದ ನಾಲ್ಕು ಆತ್ಮಹತ್ಯಾ ಪತ್ರಗಳು ಪತ್ತೆಯಾಗಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
"ಎರಡನೇ ಮಹಡಿಯಲ್ಲಿ ರಕ್ತದ ಮಡುವಿನಲ್ಲಿ ಇಬ್ಬರು ಮಹಿಳೆಯರ ಶವಗಳು ಪತ್ತೆಯಾಗಿವೆ. ಮೊದಲ ಮಹಡಿಯಲ್ಲಿ ಇಬ್ಬರು ವ್ಯಕ್ತಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಕಿರಣ್ ದಲ್ವಿ, ಅವರ ಇಬ್ಬರು ಪುತ್ರಿಯರಾದ ಮುಸ್ಕಾನ್ ಹಾಗೂ ಭೂಮಿ ಮತ್ತು ಶಿವದಯಾಳ್ ಸೇನ್ ಎಂದು ಗುರುತಿಸಲಾಗಿದೆ.
ಕೊಲೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ತನಿಖೆಯನ್ನು ಆರಂಭಿಸಲಾಗಿದೆ.
Next Story





