Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಪಾಲಿಕೆ ಸದಸ್ಯರ ಅನುದಾನದಲ್ಲಿ ತಾರತಮ್ಯ...

ಪಾಲಿಕೆ ಸದಸ್ಯರ ಅನುದಾನದಲ್ಲಿ ತಾರತಮ್ಯ ಆರೋಪ; ಮನಪಾ ಸಾಮಾನ್ಯ ಸಭೆಯಲ್ಲಿ ಪ್ರತಿಪಕ್ಷದಿಂದ ಧರಣಿ

ವಾರ್ತಾಭಾರತಿವಾರ್ತಾಭಾರತಿ30 Jun 2022 6:51 PM IST
share
ಪಾಲಿಕೆ ಸದಸ್ಯರ ಅನುದಾನದಲ್ಲಿ ತಾರತಮ್ಯ ಆರೋಪ; ಮನಪಾ ಸಾಮಾನ್ಯ ಸಭೆಯಲ್ಲಿ ಪ್ರತಿಪಕ್ಷದಿಂದ ಧರಣಿ

ಮಂಗಳೂರು: ಪಾಲಿಕೆ ಸದಸ್ಯರ ಅನುದಾನದಲ್ಲಿ ಪಕ್ಷವಾರು ತಾರಮತ್ಯ ಮಾಡಲಾಗಿದೆ ಎಂದು ಆರೋಪಿಸಿ ಗುರುವಾರ ನಡೆದ ಮಂಗಳೂರು ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪ್ರತಿಪಕ್ಷದ ಸದಸ್ಯರು ಈ ವಿಚಾರವನ್ನು  ಸಭಾತ್ಯಾಗ ಮಾಡಿ, ಸದನದ ಬಾವಿಗಿಳಿದು ಧರಣಿ ನಡೆಸಿದ ಘಟನೆ ನಡೆಯಿತು.

ಈ ವೇಳೆ ಸಭೆಯನ್ನು ಕೆಲ ಹೊತ್ತು ಮುಂದೂಡಿದ ಮೇಯರ್ ಪ್ರೇಮಾನಂದ ಶೆಟ್ಟಿ, ಪ್ರತಿಪಕ್ಷದ ಸದಸ್ಯರೊಂದಿಗೆ ಸಂಧಾನ ಸಭೆ ನಡೆಸಿ, ಯಾವುದೇ ಸಮಸ್ಯೆಯಾಗದಂತೆ ಸರಿಪಡಿಸುವುದಾಗಿ ಭರವಸೆ ನೀಡಿದರು. ಬಳಿಕ ಮತ್ತೆ ಸಭೆ ಆರಂಭವಾಯಿತು.

ಇದಕ್ಕೂ ಮೊದಲು ಸದನದಲ್ಲಿ ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷ ಸದಸ್ಯ ಅಬ್ದುಲ್ ರವೂಫ್, ಮಂಗಳೂರು ಉತ್ತರ ಮತ್ತು ದಕ್ಷಿಣ ಶಾಸಕರು ಸುಮಾರು 7 ಕೋಟಿ ರೂ. ಮೊತ್ತದ ಸಾಮಾನ್ಯ ನಿಧಿಯನ್ನು  ಅವರಿಗೆ ಬೇಕಾದ ಹಾಗೆ ಕ್ರಿಯಾ ಯೋಜನೆ ತಯಾರಿಸಿ ಅನುಮೋದನೆಗೆ ಮಂಡಿಸಿದ್ದಾರೆ. ಶಾಸಕರು ಸರ್ಕಾರದಿಂದ ಬರುವ ಅನುದಾನ ವನ್ನು ಪಾಲಿಕೆಗೆ ತಂದು ಅದರಲ್ಲಿ ಕೆಲಸ ಮಾಡಿಸಬೇಕು. ಶಾಸಕರಿಗೆ ಸದನದಲ್ಲಿ ಅಧಿಕಾರ ಚಲಾಯಿಸುವ, ಕಾಮಗಾರಿಗಳಿಗೆ ಕ್ರಿಯಾ ಯೋಜನೆ ತಯಾರಿಸುವ, ಕಾಮಗಾರಿಗಳನ್ನು ವಾರ್ಡ್‌ವಾರು ಹಂಚಿಕೆ ಮಾಡುವ ಯಾವುದೇ ಅಧಿಕಾರ ಇಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ  ಪ್ರತಿಪಕ್ಷದ ಇತರ ಸದಸ್ಯರೂ ಧ್ವನಿಗೂಡಿಸಿದರು.

ಮೇಯರ್ ಸಮಜಾಯಿಷಿ ನೀಡಲು ಯತ್ನಿಸಿದರಾದರೂ, ಅದರಿಂದ ಸಂತೃಪ್ತರಾಗದ ಸದಸ್ಯರು, ಸದನದ ಬಾವಿಗಿಳಿದು, ಶಾಸಕರು ಅಧಿಕಾರ ದುರುಪಯೋಗ ಪಡಿಸಿದ್ದಾರೆ ಎಂದು ಘೋಷಣೆ ಕೂಗಿ, ದಿಕ್ಕಾರ ಹೇಳಿದರು. ಈ ವೇಳೆ ಆಡಳಿತ ಪಕ್ಷದ ಸದಸ್ಯರು ಶಾಸಕರ ಪರವಾಗಿ ಜೈಕಾರ ಹಾಕಿದ್ದು, ಕೆಲ ಹೊತ್ತು ಗೊಂದಲದ ವಾತಾವರಣ ಉಂಟಾಯಿತು.

ಎಬಿ ಶೆಟ್ಟಿ ವೃತ್ತ ಮರು ನಿರ್ಮಾಣ

ಸದಸ್ಯ ದಿವಾಕರ ಪಾಂಡೇಶ್ವರ ಸ್ಮಾರ್ಟ್ ಸಿಟಿ ಕಾಮಗಾರಿಗಾಗಿ ತೆರವು ಮಾಡಲಾಗಿರುವ ಎಬಿ ಶೆಟ್ಟಿ ವೃತ್ತವನ್ನು ಮರು ನಿರ್ಮಾಣ ಮಾಡಿ ನಾಮಕರಣ ಮಾಡುವ ಕೆಲಸವಾಗಬೇಕು ಎಂದು ಆಗ್ರಹಿಸಿದರು. ಇದಕ್ಕೆ ಶಶಿಧರ ಹೆಗ್ಡೆ ಧ್ವನಿಗೂಡಿಸಿದರು. ಮೇಯರ್ ಉತ್ತರಿಸಿ, ಲೂಪ್ ರಸ್ತೆ ನಿರ್ಮಾಣದ ವೇಳೆ ವೃತ್ತವನ್ನು ತೆಗೆಯಲಾಗಿದ್ದು, ಸ್ಥಳದಲ್ಲೀಗ ಟ್ರಾಫಿಕ್ ಐಲೆಂಡ್ ರಚಿಸಲಾಗಿದೆ. ಹ್ಯಾಮಿಲ್ಟನ್ ವೃತ್ತದಲ್ಲೂ ಅದೇ ರೀತಿ ಮಾಡಲಾಗಿದೆ. ಎಬಿ ಶೆಟ್ಟಿ ವೃತ್ತವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಬ್ಯಾಂಕ್ ಆಫ್ ಬರೋಡಾದವರು ಮುಂದೆ ಬಂದಿದ್ದು, ವಿನ್ಯಾಸ ಕಳುಹಿಸುವಂತೆ ತಿಳಿಸಿದ್ದೇವೆ. ಎಬಿ ಶೆಟ್ಟಿಯವರ ಹೆಸರಿನಲ್ಲೇ ವೃತ್ತ ನಿರ್ಮಿಸಲಾಗುವುದು ಎಂದರು.

ಎಲ್‌ಇಡಿ ಅಳವಡಿಕೆ ಮತ್ತೆ ಆರಂಭ

ನಗರದಲ್ಲಿ ಸ್ಮಾರ್ಟ್ ಸಿಟಿಯಿಂದ ಎಲ್‌ಇಡಿ ಬೀದಿದೀಪಗಳ ಅಳವಡಿಕೆಗೆ ಸರಿಯಾಗಿ ಆಗುತ್ತಿಲ್ಲ. ಬೆಳಗ್ಗೆ ಹೊಸ ಬಲ್ಬ್ ಹಾಕಿದರೆ ಸಂಜೆ ಉರಿಯುವುದಿಲ್ಲ ಎಂದು ಸದಸ್ಯ ಅಬ್ದುಲ್ ರವೂಫ್ ಆರೋಪಿಸಿದರು. ಇದಕ್ಕೆ ಇತರ ಸದಸ್ಯರೂ ಧ್ವನಿಗೂಡಿಸಿದರು. ಉತ್ತರಿಸಿದ ಆಯುಕ್ತರು, ನಗರದಲ್ಲಿ ಪಿಪಿಪಿ ಮಾದರಿಯಲ್ಲಿ ಹೊಸ ಎಲ್‌ಇಡಿ ಅಳವಡಿಸಲು 2021ರಲ್ಲಿ ಟೆಂಡರ್ ನೀಡಲಾಗಿತ್ತು. ಅವರು ನಿಗದಿತ ಅವಧಿಯಲ್ಲಿ ಕೇವಲ ಶೇ.25ರಷ್ಟು ಮಾತ್ರ ಅಳವಡಿಸಿದ್ದು, ಮೂರು ತಿಂಗಳು ಹೆಚ್ಚುವರಿ ಅವಧಿ ಕೇಳಿದ್ದರು. ಇದಕ್ಕೆ ಕೆಯುಐಡಿಎಫ್‌ಸಿಯಿಂದ ಅನುಮತಿ ಸಿಕ್ಕಿದೆ. ಶೀಘ್ರ ಅಳವಡಿಕೆಯಾಗಲಿದೆ ಎಂದರು.

ವಾರ್ಡ್ ಸಭೆಗಳಲ್ಲಿ ಸದಸ್ಯರ ಹಕ್ಕುಚ್ಯುತಿಗೆ ಆಕ್ಷೇಪ

ನಗರದಲ್ಲಿ ಹೊಸದಾಗಿ ರಚನೆಯಾಗಿರುವ ವಾರ್ಡ್ ಸಮಿತಿ ಸಭೆಗಳಲ್ಲಿ ಸದಸ್ಯರನ್ನು ಕೀಳುಮಟ್ಟದಲ್ಲಿ ಬಯ್ಯು ವುದರ ಮೂಲಕ ಹಕ್ಕುಚ್ಯುತಿ ಮಾಡುತ್ತಿದ್ದಾರೆ ಎಂದು ಸದಸ್ಯರು ಪಕ್ಷಾತೀತವಾಗಿ ಆರೋಪಿಸಿದರು. ಸದಸ್ಯ ದಿವಾಕರ ಪಾಂಡೇಶ್ವರ ವಿಷಯ ಪ್ರಸ್ತಾಪಿಸಿ, ನಗರದಲ್ಲಿ ಇಂಜಿನಿಯರ್‌ಗಳ ಕೊರತೆಯಿದ್ದು, ತಿಂಗಳಿಗೊಮ್ಮೆ ನಡೆಯುವ ವಾರ್ಡ್ ಸಭೆಯಲ್ಲಿ ಈಗಾಗಲೇ ಅವರು ಭಾಗವಹಿಸುತ್ತಿದ್ದಾರೆ. ಇದೀಗ 60 ವಾರ್ಡ್‌ಗಳಿಗೆ 121 ಏರಿಯಾ ಸಭಾಗಳು ರಚನೆಯಾದರೆ ಅದಕ್ಕೆ ಬೇಕಾದಷ್ಟು ಅಧಿಕಾರಿ, ಇಂಜಿನಿಯರ್‌ಗಳಿಲ್ಲ ಎಂದರು.

ಜಗದೀಶ್ ಶೆಟ್ಟಿ, ರಾಧಾಕೃಷ್ಣ, ಶೋಭಾ ಪೂಜಾರಿ, ಮನೋಹರ್ ಕದ್ರಿ, ಅಬ್ದುಲ್ ಲತೀಫ್, ಸಂಗೀತಾ ನಾಯಕ್ ಪೂರಕವಾಗಿ ಮಾತನಾಡಿ, ವಾರ್ಡ್ ಸಮಿತಿ ಸಭೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದರು.

ಆಯುಕ್ತರು ಉತ್ತರಿಸಿ, ಸಭೆಯಲ್ಲಿ ಸಮಿತಿ ಸದಸ್ಯರಿಗೆ ಮಾತ್ರ ಮಾತನಾಡುವ ಅಧಿಕಾರವಿದೆ. ಸಾರ್ವಜನಿಕರು ವೀಕ್ಷಕರಾಗಿ ಭಾಗವಹಿಸಬಹುದು. ಈ ಕುರಿತ ಸತ್ತೋಲೆಯನ್ನು ಮತ್ತೆ ಹೊರಡಿಸಲಾಗುವುದು ಎಂದರು.  ಮೇಯರ್ ಮಾತನಾಡಿ, ವಾರ್ಡ್ ಸಮಿತಿಯ ಗೊಂದಲಗಳನ್ನು ನಿವಾರಿಸಿದ ಬಳಿಕವಷ್ಟೇ ಏರಿಯಾ ಸಭಾಗಳನ್ನು ರಚಿಸಲಾಗುವುದು ಎಂದರು.

ನಗರದಲ್ಲಿ ತ್ಯಾಜ್ಯ ವಿಲೇವಾರಿಯ ಗುತ್ತಿಗೆ ವಹಿಸಿಕೊಂಡಿರುವ ಆ್ಯಂಟನಿ ವೇಸ್ಟ್ ಸಂಸ್ಥೆಯವರು, ತ್ಯಾಜ್ಯ ಸಂಗ್ರಹ ವಿಚಾರವಾಗಿ ನಿರ್ಲಕ್ಷ್ಯ ವಹಿಸುತ್ತಿದ್ದು, ಮನೆಮನೆ ಸಂಗ್ರಹ, ರಸ್ತೆ ಗುಡಿಸುವಿಕೆ ಸರಿಯಾಗಿ ಆಗುತ್ತಿಲ್ಲ ಎಂದು ಸದಸ್ಯ ನವೀನ್ ಡಿಸೋಜ ಆಕ್ಷೇಪಿಸಿದರು.

ಪೂರಕವಾಗಿ ಮಾತನಾಡಿದ ಸಚೇತಕ ಸುಧೀರ್ ಶೆಟ್ಟಿ, ಪೌರ ಕಾರ್ಮಿಕರು ಶುಕ್ರವಾರದಿಂದ ಅನಿರ್ದಿಷ್ಟಾವಧಿ ಧರಣಿ ನಡೆಸಲಿದ್ದು, ಸಮಸ್ಯೆ ಉದ್ಭವವಾಗುವ ಸಾಧ್ಯತೆಯಿದೆ ಎಂದರು. ಸಂಗೀತಾ ನಾಯಕ್ ಅವರೂ ಇದಕ್ಕೆ ಧ್ವನಿಗೂಡಿಸಿದರು. ಪರಿಸರ ಇಂಜಿನಿಯರ್ ಪ್ರತಿಕ್ರಿಯೆ ನೀಡಿ ಪ್ರತಿದಿನ ತ್ಯಾಜ್ಯ ವಿವೇವಾರಿಯನ್ನು ಪರಿಶೀಲಿಸಿ ದಾಖಲು ಮಾಡಲಾಗುತ್ತಿದೆ. ಅದನ್ನು ಪರಿಶೀಲಿಸಿ ಬಿಲ್ ಪಾವತಿ ವೇಳೆ ಮೊತ್ತವನ್ನು ಕಡಿತ ಮಾಡುತ್ತದೆ.  ಫೆಬ್ರವರಿ ಮತ್ತು ಮಾರ್ಚ್ ತಿಂಗಳಿಗೆ ಸಂಬಂಧಿಸಿದಂತೆ ಎರಡು ಜೋನ್‌ಗಳಲ್ಲಿ ಒಟ್ಟು 6 ಲಕ್ಷ ರೂ. ಬಿಲ್‌ನಿಂದ ಕಡಿತಗೊಳಿಸಲಾಗಿದೆ ಎಂದರು. ಮೇಯರ್ ಮಾತನಾಡಿ, ಸದಸ್ಯರು ತಮ್ಮ ವ್ಯಾಪ್ತಿಯಲ್ಲಿ ಲೋಪದೋಷ ಗಳಿದ್ದರೆ, ಲಿಖಿತವಾಗಿ ದೂರು ನೀಡಬಹುದು ಎಂದರು.

ಹೊಸ ಗುತ್ತಿಗೆಗೆ ಶೀಘ್ರ ಟೆಂಟರ್ 

ತ್ಯಾಜ್ಯ ವಿಲೇವಾರಿಗೆ ಹೊಸ ಗುತ್ತಿಗೆ ನೀಡುವ ಸಂಬಂಧ ಎರಡು ಡಿಪಿಆರ್‌ನ್ನು ಈಗಾಗಲೇ ಸರ್ಕಾರಕ್ಕೆ ಕಳುಹಿಸಲಾಗಿತ್ತು. ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಅದನ್ನು ಸರಳೀಕರಿಸಿ ಒಂದೇ ಪ್ರಸ್ತಾವನೆ ಮಾಡಿ ಕಳಹಿಸುವಂತೆ ಸೂಚಿಸಿದ್ದು, ಅದರಂತೆ ಎರಡೂ ಡಿಪಿಆರ್‌ನಲ್ಲಿರುವ ಉತ್ತಮ ಅಂಶಗಳನ್ನ ಕ್ರೋಢೀಕರಿಸಿ ಮತ್ತೆ ಕಳುಹಿಸಲಾಗಿತ್ತು. ಸೋಮವಾರ ನಡೆದ ಸಭೆಯಲ್ಲಿ ಅದಕ್ಕೆ ಅನುಮೋದನೆ ಸಿಕ್ಕಿದ್ದು, ಸಭೆಯ ನಡವಳಿ ಲಭ್ಯವಾದ ಬಳಿಕ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಆಯುಕ್ತ ಅಕ್ಷಯ್ ಶ್ರೀಧರ್ ವಿವರಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X