ಅಡ್ಡೂರು: ತಡೆಗೋಡೆ, ಭೂಕುಸಿತ

ಮಂಗಳೂರು: ಗುರುಪುರ ಗ್ರಾಪಂ ವ್ಯಾಪ್ತಿಯ ಅಡ್ಡೂರು ಗ್ರಾಮದ ನೂಯಿ, ಕಾಂಜಿಲಕೋಡಿ, ಕುಚ್ಚಿಗುಡ್ಡೆಯಲ್ಲಿ ತಡೆಗೋಡೆ ಹಾಗೂ ಮನೆಯೊಂದರ ಪಕ್ಕದಲ್ಲಿ ಭೂಕುಸಿತ ಸಂಭವಿಸಿದೆ.
ಕಾಂಜಿಲಕೊಡಿಯಿಂದ ಪೊನ್ನೆಲಾ ಸಂಪರ್ಕಿಸುವ ರಸ್ತೆ ಪಕ್ಕದಲ್ಲಿ ತಡೆಗೋಡೆ ಕುಸಿದು ಸಂಚಾರಕ್ಕೆ ತೊಂದರೆ ಯಾಗಿತ್ತು. ಕುಚಿಗುಡ್ಡೆ ಅಂಗನವಾಡಿ ಕೇಂದ್ರದ ತಡೆಗೋಡೆ ಕುಸಿದು ಭಾರೀ ಅಪಾಯ ಎದುರಿಸುತ್ತಿವೆ. ಕುಚ್ಚಿಗುಡ್ಡೆ ಶರೀಫ್ ಅವರ ಮನೆ ಪಕ್ಕ ಭೂಕುಸಿತ ಸಂಭವಿಸುವ ಆತಂಕ ಎದುರಾಗಿದ್ದು, ಕುಟುಂಬವನ್ನು ಸ್ಥಳಾಂತರಿಸ ಲಾಗಿದೆ ಎಂದು ತಿಳಿದು ಬಂದಿದೆ.
ಪ್ರಕೃತಿ ವಿಕೋಪ ಸಂಭವಿಸಿದ ಸ್ಥಳಕ್ಕೆ ಗುರುಪುರ ಗ್ರಾಪಂ ಅಧ್ಯಕ್ಷ ಯಶವಂತ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷೆ ದಿಲ್‌ಶಾದ್, ಪಿಡಿಒ ಅಬೂಬಕರ್, ಕಾರ್ಯದರ್ಶಿ ಅಶೋಕ್, ಸದಸ್ಯರಾದ ಶಾಹಿಕ್, ಮನ್ಸೂರ್, ಮರಿಯಂ, ಅಝ್ಮೀನ ಭೇಟಿ ನೀಡಿದರು.
Next Story