Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಝುಬೈರ್ ಬಂಧನ: ಇದೆಂತಹ ಬದ್ಧತೆ!?

ಝುಬೈರ್ ಬಂಧನ: ಇದೆಂತಹ ಬದ್ಧತೆ!?

ವಾರ್ತಾಭಾರತಿವಾರ್ತಾಭಾರತಿ1 July 2022 12:08 AM IST
share
ಝುಬೈರ್ ಬಂಧನ: ಇದೆಂತಹ ಬದ್ಧತೆ!?

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಇತ್ತೀಚೆಗೆ ನಡೆದ ಜಿ-7 ಶೃಂಗ ಸಭೆಯಲ್ಲಿ ಭಾರತವೂ ಸಹ ಇತರ ಆಹ್ವಾನಿತ ನಾಲ್ಕು ದೇಶಗಳೊಂದಿಗೆ ಆನ್‌ಲೈನ್ ಮತ್ತು ಆಫ್‌ಲೈನ್ ಬಗೆಯ ಎಲ್ಲಾ ಮಾಧ್ಯಮಗಳಲ್ಲೂ ಅಭಿವ್ಯಕ್ತಿ ಮತ್ತು ಅಭಿಪ್ರಾಯ ಸ್ವಾತಂತ್ರ್ಯಗಳನ್ನು ರಕ್ಷಿಸುವ ಜಂಟಿ ಹೇಳಿಕೆಗೆ ಸಹಿ ಮಾಡಿತು. ಆ ಸಂದರ್ಭದಲ್ಲಿ ಪ್ರಧಾನಿ ಮೋದಿಯವರಂತೂ ‘‘ಭಾರತವು ಒಂದು ಸ್ವತಂತ್ರ ಮತ್ತು ಬಹುತ್ವ ಮೌಲ್ಯಗಳ ಮಾಧ್ಯಮ ಹಾಗೂ ಮಾಹಿತಿಗಳ ಮುಕ್ತ ಸಂವಹನದ ಮೂಲಕ ಪ್ರಜಾತಂತ್ರದ ಅಡಿಪಾಯವನ್ನು ಗಟ್ಟಿಗೊಳಿಸಲು ಬದ್ಧವಾಗಿದೆ’’ ಎಂದು ಘೋಷಿಸಿದರು. ವಿಪರ್ಯಾಸವೆಂದರೆ, ಅದೇ ಸಮಯದಲ್ಲಿ ಭಾರತದಲ್ಲಿ ಅವರ ಸರಕಾರ ಸ್ವತಂತ್ರ ಮಾಧ್ಯಮ ಹಾಗೂ ಧೈರ್ಯಶಾಲಿ ಪತ್ರಿಕೋದ್ಯಮಕ್ಕೆ ಸಂಕೇತದಂತಿರುವ ‘ಆಲ್ಟ್ ನ್ಯೂಸ್’- ಸತ್ಯ ಶೋಧಕ ವೆಬ್ ಸಂಸ್ಥೆಯ ಸಹ ಸಂಪಾದಕ ಮುಹಮ್ಮದ್ ಝುಬೈರ್ ಅವರನ್ನು ಅತ್ಯಂತ ಕುತಂತ್ರದಿಂದ ಹಾಗೂ ಕ್ಷುಲ್ಲಕ ಕಾರಣಗಳನ್ನು ಒಡ್ಡಿ ಬಂಧಿಸಿತ್ತು. ಝುಬೈರ್ ಮತ್ತು ಅವರ ಪತ್ರಿಕೆ ಆಡಳಿತಾರೂಢ ಬಿಜೆಪಿ ಹಾಗೂ ಇತರ ಬಲಪಂಥೀಯ ಧಾರೆಗಳು ಬಿತ್ತರಿಸುವ ಸುಳ್ಳು ಸುದ್ದಿಗಳ ಅಸಲಿಯತ್ತನ್ನು ಆಧಾರ ಸಮೇತ ಬಯಲಿಗೆಳೆಯುತ್ತಾ ಬಂದಿವೆ. ಇತ್ತೀಚೆಗೆ ನೂಪುರ್ ಶರ್ಮಾ ಮತ್ತು ಜಿಂದಾಲ್ ಎಂಬ ಇಬ್ಬರು ಬಿಜೆಪಿಯ ಪದಾಧಿಕಾರಿಗಳು ಇಸ್ಲಾಮ್ ಮತ್ತು ಪ್ರವಾದಿಯ ಬಗ್ಗೆ ನೀಡಿದ ವಿಷಕಕ್ಕುವ ಹೇಳಿಕೆಗಳನ್ನು ಸಾರ್ವಜನಿಕರ ಗಮನಕ್ಕೆ ತಂದದ್ದು ಇದೇ ಸಂಸ್ಥೆ. ಅದರಿಂದಾಗಿ ಬಿಜೆಪಿ ಮತ್ತು ಸಂಘಪರಿವಾರದ ದ್ವೇಷ ರಾಜಕಾರಣವು ಜಗತ್ತಿನಾದ್ಯಂತ ಬಯಲುಗೊಂಡು ಅವರಿಬ್ಬರ ಮೇಲೆ ಪಕ್ಷವು ಕ್ರಮವನ್ನು ತೆಗೆದುಕೊಳ್ಳಲೇಬೇಕಾದ ಅನಿವಾರ್ಯತೆ ಉಂಟಾಗಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಝುಬೈರ್ ಅವರ ಹೆಸರೂ ಕೂಡ ಬಲಪಂಥೀಯರ ಪುರುಷ ಅಹಂ ಮತ್ತು ಕೋಮು ಪ್ರತಿಷ್ಠೆಯನ್ನು ಕೆರಳಿಸಿತ್ತು ಎಂಬುದು ಝುಬೈರ್ ಅವರ ಮೇಲೆ ಇಡೀ ಪ್ರಭುತ್ವವೇ ಮುಗಿಬಿದ್ದ ರೀತಿ ಸ್ಪಷ್ಟಪಡಿಸುತ್ತದೆ. ಝುಬೈರ್ ಅವರ ಮೇಲೆ ಎರಡು ಸಮುದಾಯಗಳ ನಡುವೆ ದ್ವೇಷ ಬಿತ್ತುವ ಹಾಗೂ ಒಂದು ಧರ್ಮದವರಿಗೆ ಅವಮಾನ ಪಡಿಸುವ ದುರುದ್ದೇಶದಿಂದಲೇ ಕೃತ್ಯವೆಸಗಿರುವ ಆರೋಪವನ್ನು ಹೊರಿಸಲಾಗಿದೆ.

ಆದರೆ ಅದಕ್ಕಾಗಿ ಪೊಲೀಸರು ತೋರಿಸಿರುವ ಕಾರಣ ನಾಲ್ಕು ವರ್ಷಗಳ ಕೆಳಗೆ, 2018ರಲ್ಲಿ, ಝುಬೈರ್ ಅವರು ಮಾಡಿದ್ದ ಒಂದು ಟ್ವೀಟ್. ಅದರ ಬಗ್ಗೆ ದೂರು ಕೊಟ್ಟಿರುವುದು ಒಬ್ಬ ಅನಾಮಧೇಯ ಟ್ವೀಟ್ ಖಾತೆದಾರ!ಝುಬೈರ್ ಅವರು ಅಂದಿನ ತಮ್ಮ ಟ್ವೀಟ್‌ನಲ್ಲಿ 1983ರಲ್ಲಿ ಬಿಡುಗಡೆಯಾದ ಹೃಷಿಕೇಶ್ ಮುಖರ್ಜಿಯವರ ನವಿರು ಹಾಸ್ಯ ಚಿತ್ರವಾದ ‘ಕಿಸೀಸೆ ನ ಕೆಹನ’ ದಲ್ಲಿ ‘ಹೋಟೆಲ್ ಹನಿಮೂನ್’ ಎಂದಿದ್ದ ಹೋಟೆಲ್‌ನ ಹೆಸರು ಸಣ್ಣ ಅಕ್ಷರ ಬದಲಾವಣೆಯೊಂದಿಗೆ ಹೋಟೆಲ್ ‘ಹನುಮಾನ್’ ಎಂದು ಬದಲಾಗಿರುವ ಸನ್ನಿವೇಶವನ್ನು ಬಳಸಿಕೊಂಡಿದ್ದಾರೆ ಹಾಗೂ ಅದನ್ನು ವಿಡಂಬನಾತ್ಮಕವಾಗಿ 2014ಕ್ಕೆ ಮುಂಚೆ ಹನಿಮೂನ್, 2014ರ ನಂತರ ಹನುಮಾನ್ ಎಂದು ಟಿಪ್ಪಣಿ ಮಾಡಿದ್ದಾರೆ. ಇದರಲ್ಲಿ ಕಾನೂನು ಭಂಗವಾಗುವ ಅಥವಾ ಒಂದು ಸಮುದಾಯದ ಮನಸ್ಸಿಗೆ ಘಾಸಿಯುಂಟು ಮಾಡುವ ಯಾವ ಸಂಗತಿ ಇದೆ? ಏಕೆಂದರೆ ಈ ಸನ್ನಿವೇಶವಿರುವ ಮೂಲ ಚಿತ್ರ 1983ರಿಂದಲೂ ಯಾವುದೇ ಸೆನ್ಸಾರ್ ಇಲ್ಲದೆ ಎಲ್ಲಾ ಧರ್ಮದ ಜನರನ್ನೂ ರಂಜಿಸುತ್ತಿದೆ ಮತ್ತು ಝುಬೈರ್ ಅವರ ಟ್ವೀಟಿನ ಸಾರಾಂಶ ಹನುಮಾನ್ ವಿಡಂಬನೆಯಲ್ಲ. ಬದಲಿಗೆ ಅದು ಮೋದಿ ನಂತರದ ರಾಜಕಾರಣವನ್ನು ವಿಡಂಬನೆ ಮಾಡುತ್ತದೆಯಷ್ಟೆ. ಒಂದು ರಾಜಕೀಯ ವಿಡಂಬನೆಯನ್ನು ಸಹಿಸದ ಸರಕಾರ ‘‘ಮುಕ್ತ ಮಾಧ್ಯಮವನ್ನು ರಕ್ಷಿಸುವ ಮೂಲಕ ಪ್ರಜಾತಂತ್ರದ ಅಡಿಪಾಯವನ್ನು ಗಟ್ಟಿಗೊಳಿಸುತ್ತೇವೆ’’ ಎಂದು ಜಿ-7 ಸಭೆಯಲ್ಲಿ ಘೋಷಿಸುವುದು ಸೋಗಲಾಡಿತನವಲ್ಲವೇ? ಅಲ್ಲದೆ, ಝುಬೈರ್ ಅವರ ಟ್ವೀಟ್ ಕಳೆದ ನಾಲ್ಕು ವರ್ಷಗಳಲ್ಲಿ ಯಾರ ಮನಸ್ಸಿಗೂ ಘಾಸಿಯುಂಟು ಮಾಡಿಲ್ಲ ಹಾಗೂ ದ್ವೇಷವನ್ನು ಹುಟ್ಟಿಹಾಕಿಲ್ಲ. ಹಾಗಿದ್ದ ಮೇಲೆ ದಿಢೀರನೇ ಈ ಟ್ವೀಟ್ ಹಾನಿಕರವೆಂದು ಪೊಲೀಸರು ಭಾವಿಸಿದ್ದು ಹೇಗೆ? ಈ ಪ್ರಶ್ನೆ ಅತ್ಯಂತ ಮುಖ್ಯವಾದುದು. ಏಕೆಂದರೆ ಪೊಲೀಸರು ದಾಖಲಿಸಿರುವ ಟ್ವಿಟರ್ ದೂರುದಾರ ಹನುಮಾನ್ ಭಕ್ತ ಎನ್ನುವ ಹೆಸರಲ್ಲಿ ಜೈಬಾಲಾಜಿಕೆ ಎಂಬ ಟ್ವೀಟ್ ಖಾತೆ ಪ್ರಾರಂಭಿಸಿದ್ದೇ 2021ರಲ್ಲಿ ಮತ್ತು 2022ರ ಜೂನ್ 19ರ ತನಕ ಆ ಖಾತೆಯನ್ನು ಆತ ನಿರ್ವಹಿಸಿರಲಿಲ್ಲ ಮತ್ತು ಯಾರೂ ಆ ಖಾತೆಯನ್ನು ಫಾಲೋ ಕೂಡ ಮಾಡುತ್ತಿರಲಿಲ್ಲ. ಆ ಖಾತೆಯಲ್ಲಿರುವ ಒಂದೇ ಒಂದು ಪೋಸ್ಟ್, 2022 ಜೂನ್ 20ರದ್ದು. ಝುಬೈರ್ ಅವರ 2018ರ ಹೊಟೇಲ್ ಹನುಮಾನ್ ಟ್ವೀಟ್ ಮಾತ್ರ. ಅದನ್ನು ಆತ ದಿಲ್ಲಿ ಪೊಲೀಸ್‌ಗೆ ಟ್ಯಾಗ್ ಮಾಡಿ ತನ್ನ ಮನಸ್ಸಿಗೆ ಈ ಟ್ವೀಟ್ ನಿಂದ ಘಾಸಿಯಾಗಿದೆಯೆಂದು, ಝುಬೈರ್ ಅವರನ್ನು ಬಂಧಿಸಬೇಕೆಂದು ಮನವಿ ಮಾಡುತ್ತಾನೆ. ಕೂಡಲೇ ದೂರುದಾರ ಯಾರೆಂದೂ ವಿಚಾರಿಸದೆ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ ಮತ್ತು ಆ ಟ್ವೀಟ್ ಖಾತೆ ಈಗ ಬಂದ್ ಆಗಿದೆ! ದೆಹಲಿ ಪೊಲೀಸರು ಝುಬೈರ್ ಅವರನ್ನು ಬಂಧಿಸಿದ ರೀತಿಯೂ ಅತ್ಯಂತ ಕುತಂತ್ರದಿಂದ ಕೂಡಿದೆ. ಬೇರೆ ಯಾವುದೋ ಪ್ರಕರಣಕ್ಕೆ ವಿಚಾರಣೆಗಾಗಿ ಅವರನ್ನು ದಿಲ್ಲಿ ಪೊಲೀಸರು ಕರೆಸಿಕೊಂಡು ಈ ಪ್ರಕರಣದಲ್ಲಿ ದಿಢೀರನೆ ಬಂಧಿಸಿದ್ದಾರೆ. ಈ ಎಲ್ಲಾ ವಿಷಯಗಳು ಗಮನದಲ್ಲಿದ್ದರೂ ದಿಲ್ಲಿ ನ್ಯಾಯಾಲಯ ಇಂತಹ ಕ್ಷುಲ್ಲಕ ಪ್ರಕರಣಕ್ಕೆ ಝುಬೈರ್ ಅವರನ್ನು ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕೊಡುತ್ತದೆ ಮತ್ತು ಈ ಅವಧಿಯಲ್ಲಿ ದಿಲ್ಲಿ ಪೊಲೀಸರು ಒಬ್ಬ ಸ್ವತಂತ್ರ ಪತ್ರಕರ್ತರಾದ ಝುಬೈರ್ ಅವರ ಲ್ಯಾಪ್‌ಟಾಪ್, ಮೊಬೈಲ್ ಹಾಗೂ ಇತರ ಮಾಹಿತಿ ಹಾಗೂ ಸಂವಹನ ಸಾಧನಗಳನ್ನು ವಶಕ್ಕೆ ತೆಗೆದುಕೊಳ್ಳುತ್ತದೆ. ಇದೇ ಅಡಳಿತಾರೂಢ ಸರಕಾರದ ಅಸಲಿ ಉದ್ದೇಶವೂ ಅಗಿತ್ತೇ?

ಹೀಗಾಗಿ ಇದು ಬಿಜೆಪಿ ಸರಕಾರದ ಸೇಡಿನ ಕ್ರಮ ಎಂಬುದರಲ್ಲಿ ಅನುಮಾನವೇ ಇಲ್ಲ. ಒಂದೆಡೆ ನೂಪುರ್ ಶರ್ಮಾ, ಜಿಂದಾಲ್ ಅವರ ಮೇಲೆ ಪ್ರಕರಣಗಳು ದಾಖಲಾಗಿದ್ದರೂ ಅವರನ್ನು ಬಂಧಿಸುವ ಬದಲಿಗೆ ಮತ್ತಷ್ಟು ರಕ್ಷಣೆಯನ್ನು ಒದಗಿಸಲಾಗಿದೆ, ಮತ್ತೊಂದೆಡೆ ಪೊಲೀಸರು ಝುಬೈರ್ ಅವರನ್ನು ಅನಾಮಧೇಯ ಹಾಗೂ ಸಂಶಯಾಸ್ಪದ ದೂರಿನ ಮೇಲೆ ಬಂಧಿಸಿದರೆ ಕೋರ್ಟ್ ಅವರನ್ನು ಪೊಲೀಸ್ ಕಸ್ಟಡಿಗೆ ಕೊಟ್ಟಿದೆ. ಇದು ಸ್ವತಂತ್ರ ಮಾಧ್ಯಮದ ಮೇಲೆ ಮೋದಿ ಸರಕಾರದ ಮತ್ತೊಂದು ಸೇಡಿನ ಕ್ರಮವಾಗಿದೆ. ಇದು ನಿಲ್ಲಬೇಕು. ಕೂಡಲೇ ಝುಬೈರ್, ತೀಸ್ತಾ ಅಂತಹವರ ಬಿಡುಗಡೆಯಾಗಬೇಕು. ಈಗಾಗಲೇ ಪ್ರಜಾತಂತ್ರ ಹಾಗೂ ಪತ್ರಿಕಾ ಸೂಚ್ಯಂಕದ ಮಾನದಂಡಗಳಲ್ಲಿ ಕ್ರೂರ ಸರ್ವಾಧಿಕಾರಿ ದೇಶಗಳ ಜೊತೆಗಿರುವ ಭಾರತ ಇನ್ನಷ್ಟು ಅಧಃಪತನಗೊಳ್ಳಬಾರದು. ಭಾರತೀಯರು ಇದಕ್ಕಿಂತ ಉತ್ತಮ ಆಡಳಿತಕ್ಕೆ ಅರ್ಹರಲ್ಲವೇ ?

share
ವಾರ್ತಾಭಾರತಿ
ವಾರ್ತಾಭಾರತಿ
Next Story
X