ಕಚೇರಿ ಧ್ವಂಸಗೊಳಿಸಿದವರ ಮೇಲೆ ಕೋಪವಿಲ್ಲ, ಅವರು ಮಕ್ಕಳು: ಎಸ್‌ಎಫ್‌ಐ ಕಾರ್ಯಕರ್ತರ ಕುರಿತು ರಾಹುಲ್ ಗಾಂಧಿ
ವಯನಾಡ್: ಕಳೆದ ವಾರ ಸಿಪಿಐ(ಎಂ)ನ ವಿದ್ಯಾರ್ಥಿ ವಿಭಾಗ ಎಸ್‌ಎಫ್‌ಐನಿಂದ ಧ್ವಂಸಗೊಂಡ ಕೇರಳದ ವಯನಾಡ್‌ನಲ್ಲಿರುವ ತಮ್ಮ ಸಂಸದ ಕಚೇರಿಗೆ ರಾಹುಲ್ ಗಾಂಧಿ ಭೇಟಿ ನೀಡಿದ್ದಾರೆ. ಬಳಿಕ ಮಾತನಾಡಿದ ಅವರು, ʼಈ ಘಟನೆ ದುರದೃಷ್ಟಕರ. ಆದರೆ ಅದರ ಬಗ್ಗೆ ಯಾವುದೇ ದ್ವೇಷ ಅಥವಾ ಕೋಪವಿಲ್ಲʼ ಎಂದು ಹೇಳಿದ್ದಾರೆ.
ಕ್ಷೇತ್ರದಲ್ಲಿ ಮೂರು ದಿನಗಳ ಪ್ರವಾಸಕ್ಕಾಗಿ ಶುಕ್ರವಾರ ರಾಹುಲ್ ಗಾಂಧಿ ವಯನಾಡ್ ತಲುಪಿದ್ದಾರೆ. “ಇದು ನನ್ನ ಕಛೇರಿ. ಆದರೆ ನನ್ನ ಕಚೇರಿಯಾಗುವ ಮೊದಲು ಇದು ವಯನಾಡಿನ ಜನರ ಕಚೇರಿ. ಕಚೇರಿ ಮೇಲೆ ದಾಳಿ ನಡೆಸಿರುವುದು ದುರದೃಷ್ಟಕರ. ಹಿಂಸೆ ಎಂದಿಗೂ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ. ಅವರು ಬೇಜವಾಬ್ದಾರಿಯಿಂದ ನಡೆದುಕೊಂಡಿರುವುದು ಒಳ್ಳೆಯದಲ್ಲ. ಅವರ ಬಗ್ಗೆ ನನಗೆ ಯಾವುದೇ ಕೋಪ ಅಥವಾ ದ್ವೇಷವಿಲ್ಲ. ಅವರು ಮಕ್ಕಳು ಮತ್ತು ಅವರ ಕೃತ್ಯದ ಪರಿಣಾಮಗಳನ್ನು ಅವರು ಅರ್ಥಮಾಡಿಕೊಳ್ಳುವುದಿಲ್ಲ, ”ಎಂದು ಅವರು ಎಸ್‌ಎಫ್‌ಐ ಅಥವಾ ಸಿಪಿಐ(ಎಂ) ಅನ್ನು ಉಲ್ಲೇಖಿಸದೆ ಹೇಳಿದ್ದಾರೆ.
Next Story