ಹೆಜಮಾಡಿ ವಿಠಲ ಭಟ್

ಪಡುಬಿದ್ರಿ: ರಾಷ್ಟೀಯ ಸ್ವಯಂಸೇವಕ ಸಂಘದ ಹಿರಿಯ ಸ್ವಯಂಸೇವಕ, ಸಮಾಜ ಸೇವಕ ವೇದಮೂರ್ತಿ ಹೆಜಮಾಡಿ ವಿಠ್ಠಲ ಭಟ್ (89) ಅವರು ಜು.1ರಂದು ನಿಧನರಾದರು.
ಹೆಜಮಾಡಿ ಮಲ್ಯರ ಮಠ ಶ್ರೀಲಕ್ಷ್ಮೀ ನಾರಾಯಣ ದೇವಸ್ಥಾನದ ಅರ್ಚಕ ರಾಗಿ ಸೇವೆ ಸಲ್ಲಿಸಿರುವ ವೇದಮೂರ್ತಿ ವಿಠಲ್ ಭಟ್ ಅವಿವಾಹಿತರಾಗಿದ್ದರು. ಹೆಜಮಾಡಿ ಗ್ರಾಮವೂ ಸೇರಿದಂತೆ ಕಾಪು ತಾಲೂಕಿನಲ್ಲಿ ಸಂಘದ ಶಾಖೆಗಳೂ ಸೇರಿದಂತೆ ಹಿಂದು ಸಂಘಟನೆಗಳನ್ನು ಕಟ್ಟಿ ಬೆಳೆಸುವಲ್ಲಿ ಇವರ ಪಾತ್ರ ಹಿರಿದಾ ಗಿತ್ತು. ಜಿಲ್ಲೆಯಲ್ಲಿ ಜನಸಂಘದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿಠ್ಠಲ್ ಭಟ್, ಡಾ.ವಿ.ಎಸ್.ಆಚಾರ್ಯ, ಕರಂಬಳ್ಳಿ ಸಂಜೀವ ಶೆಟ್ಟಿ, ಉಡುಪಿ ಸೋಮಶೇಖರ ಭಟ್ ಮುಂತಾದವರ ಒಡನಾಡಿಯಾಗಿದ್ದರು.
ಪ್ರಕೃತಿ ಪ್ರೇಮಿಯಾಗಿದ್ದ ವಿಠ್ಠಲ್ ಭಟ್, ರಸ್ತೆಯ ಇಕ್ಕೆಲಗಳಲ್ಲಿ ಮರಗಳನ್ನು ನೆಟ್ಟು ಬೆಳೆಸಿದ್ದರು. ವಿಠಲ ಭಟ್‌ರ ನಿಧನಕ್ಕೆ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಸಂತಾಪ ವ್ಯಕ್ತಪಡಿಸಿದ್ದಾರೆ.
Next Story