ಉಡುಪಿ ರೋಟರಿಯ ಸೇವಾ ಯೋಜನೆಗಳ ಉದ್ಘಾಟನೆ
ಉಡುಪಿ: ರೋಟರಿ ಉಡುಪಿ ಇದರ ವತಿಯಿಂದ ೨೦೨೨-೨೩ನೇ ಸಾಲಿನ ಸೇವಾ ಯೋಜನೆಗಳ ಉದ್ಘಾಟನೆಯು ಕಡಿಯಾಳಿಯ ಶ್ರೀಮಹಿಷ ಮರ್ದಿನಿ ರೋಟರಿ ಸ್ಕೌಟ್ ಸಭಾಭವನದಲ್ಲಿ ಶುಕ್ರವಾರ ಜರಗಿತು.
ಈ ಸಂದರ್ಭ ವೈದ್ಯರ ದಿನ, ಪತ್ರಿಕಾ ದಿನ ಹಾಗೂ ಲೆಕ್ಕ ಪರಿಶೋಧಕರ ದಿನದ ಅಂಗವಾಗಿ ಡಾ.ಜಯಂತ್ ಕುಮಾರ್, ಪತ್ರಕರ್ತ ಸುಬ್ರಹ್ಮಣ್ಯ ಗಣಪತಿ ಭಟ್(ಎಸ್.ಜಿ.ಕುರ್ಯ) ಹಾಗೂ ಸಿಎ ಅನಂತ ನಾರಾಯಣ ಪೈ ಅವರನ್ನು ಸನ್ಮಾನಿಸಲಾಯಿತು.
ರೋಟರಿ ಜಿಲ್ಲೆ ೩೧೮೨ ಗವರ್ನರ್ ಡಾ.ಎಚ್.ಜೆ.ಗೌರಿ ಕಾರ್ಯಕ್ರಮ ಉದ್ಘಾಟಿಸಿದರು. ರೋಟರಿ ವಲಯ ೪ರ ಸಹಾಯಕ ಗವರ್ನರ್ ರಾಮಚಂದ್ರ ಉಪಾಧ್ಯಾಯ, ವಲಯ ತರಬೇತುದಾರ ಡಾ.ಕೆ.ಸುರೇಶ್ ಶೆಣೈ, ವಲಯ೪ರ ಸೇನಾನಿ ರಾಜೇಶ್ ಡಿ.ಪಾಲನ್, ರೋಟರಿ ಉಡುಪಿ ನಿಕಟಪೂರ್ವ ಅಧ್ಯಕ್ಷ ಹೇಮಂತ್ ಯು.ಕಾಂತ್ ಉಪಸ್ಥಿತರಿದ್ದರು.
ಸನ್ಮಾನಿತರನ್ನು ಸೀತಾರಾಮ ತಂತ್ರಿ, ಜೆ.ಗೋಪಾಲಕೃಷ್ಣ ಪ್ರಭು, ಅನಂತರಾಮ ಬಲ್ಲಾಳ್ ಪರಿಚಯಿಸಿದರು. ರೋಟರಿ ಉಡುಪಿ ಅಧ್ಯಕ್ಷ ಸುಬ್ರಹ್ಮಣ್ಯ ಕಾರಂತ ಸ್ವಾಗತಿಸಿದರು. ಚಂದ್ರಶೇಖರ್ ಅಡಿಗ ನಿರೂಪಿಸಿದರು. ರೋಟರಿ ಉಡುಪಿ ಕಾರ್ಯದರ್ಶಿ ಗುರುರಾಜ್ ಭಟ್ ಟಿ.ವಂದಿಸಿದರು.