ಶಿವಸೇನೆಯ ಬಂಡಾಯ ಶಾಸಕರು ಸಿಎಂ ಶಿಂಧೆ ಜೊತೆ ಇಂದು ಗೋವಾದಿಂದ ಮುಂಬೈಗೆ ಮರಳುವ ಸಾಧ್ಯತೆ

Photo:PTI
ಹೊಸದಿಲ್ಲಿ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಶಿವಸೇನೆಯ ಬಂಡಾಯ ಶಾಸಕರೊಂದಿಗೆ ಇಂದು ಗೋವಾದಿಂದ ಮುಂಬೈಗೆ ಮರಳುವ ಸಾಧ್ಯತೆ ಇದೆ ಎಂದು ಮೂಲಗಳು ಎನ್ಡಿಟಿವಿಗೆ ತಿಳಿಸಿವೆ.
ಶಿಂಧೆ ಅವರು ನಿನ್ನೆ ರಾತ್ರಿ ಗೋವಾಗೆ ಪ್ರಯಾಣ ಬೆಳೆಸಿದರು. ಪ್ರಮಾಣವಚನ ಸ್ವೀಕರಿಸಿದ ನಂತರ ಅವರು ಎರಡನೇ ಬಾರಿ ಗೋವಾಕ್ಕೆ ಭೇಟಿ ನೀಡಿದರು.
ಸೋಮವಾರ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಶಿಂಧೆಗೆ ತಿಳಿಸಲಾಗಿದೆ.
ಸೋಮವಾರ ಬಲಾಬಲ ಪರೀಕ್ಷೆಯ ಹೊರತಾಗಿ ಸುಪ್ರೀಂ ಕೋರ್ಟ್ನಲ್ಲಿ ಹೈ-ವೋಲ್ಟೇಜ್ ಕ್ರಮಕ್ಕೆ ಸಾಕ್ಷಿಯಾಗುವ ಸಾಧ್ಯತೆಯಿದೆ.
ಶಿಂಧೆ ಸೇರಿದಂತೆ 15 ಶಿವಸೇನೆ ಬಂಡುಕೋರರನ್ನು ಅನರ್ಹಗೊಳಿಸುವಂತೆ ಕೋರಿ ಸುಪ್ರೀಂಕೋರ್ಟ್ ನಲ್ಲಿ ಟೀಮ್ ಠಾಕ್ರೆ ಅರ್ಜಿಗಳನ್ನು ಸಲ್ಲಿಸಿದೆ. ಅನರ್ಹತೆ ಯತ್ನವನ್ನು ಪ್ರಶ್ನಿಸಿ ನೂತನ ಮುಖ್ಯಮಂತ್ರಿ ಶಿಂಧೆ ಪಾಳೆಯ ಸಲ್ಲಿಸಿರುವ ಮತ್ತೊಂದು ಅರ್ಜಿಯ ವಿಚಾರಣೆಯೂ ಸೋಮವಾರ ನಡೆಯಲಿದೆ.
Next Story