ವಿಚಾರಣೆಗೆ ಹಾಜರಾಗದ ನೂಪುರ್ ಶರ್ಮಾ: ಪಶ್ಚಿಮ ಬಂಗಾಳ ಪೊಲೀಸರಿಂದ ಲುಕೌಟ್ ನೋಟಿಸ್

ಕೋಲ್ಕತಾ, ಜು. 2: ಪ್ರವಾದಿ ಮುಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ಕನೆ ಬಾರಿ ಕೂಡ ತನ್ನ ಮುಂದೆ ಹಾಜರಾಗಲು ವಿಫಲರಾದ ಬಳಿಕ ಬಿಜೆಪಿಯ ವಜಾಗೊಂಡ ವಕ್ತಾರೆ ನೂಪುರ್ ಶರ್ಮಾ ಅವರಿಗೆ ಕೋಲ್ಕತ್ತಾ ಪೊಲೀಸರು ಶನಿವಾರ ಲುಕೌಟ್ ನೋಟಿಸ್ ಜಾರಿಗೊಳಿಸಿದ್ದಾರೆ.
ಎಮ್‌ಹರ್ಸ್ಟ್ ಸ್ಟ್ರೀಟ್ ಹಾಗೂ ನಾರ್ಕೇಲಡಂಗಾ ಪೊಲೀಸ್ ಠಾಣೆಯ ಅಧಿಕಾರಿಗಳು ಸಮನ್ಸ್ ಜಾರಿಗೊಳಿಸಿದರೂ ನೂಪುರ್ ಶರ್ಮಾ ಹಾಜರಾಗಿರಲಿಲ್ಲ.
ಹಲವು ಬಾರಿ ಸಮನ್ಸ್ ನೀಡಿದ ಹೊರತಾಗಿಯ ತಮ್ಮ ಅಧಿಕಾರಿಗಳ ಮುಂದೆ ಹಾಜರಾಗಲು ವಿಫಲವಾದ ಬಳಿಕ ಲುಕೌಟ್ ನೋಟಿಸ್ ಹೊರಡಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಎಮ್‌ಹರ್ಸ್ಟ್ ಸ್ಟ್ರೀಟ್ ಹಾಗೂ ನಾರ್ಕೇಲಡಾಂಗ ಪೊಲೀಸ್ ಠಾಣೆಗಳು ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ ಬಳಿಕ ಪ್ರತ್ಯೇಕ ಸಮನ್ಸ್ ನೀಡಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Next Story