ಉಡುಪಿ -ಕರಾವಳಿ ಐಎಂಎಯಿಂದ ವೈದ್ಯರ ದಿನಾಚರಣೆ

ಉಡುಪಿ: ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಇದರ ವತಿಯಿಂದ ವೈದ್ಯರ ದಿನಾಚರಣೆಯನ್ನು ಶುಕ್ರವಾರ ಉಡುಪಿ ಐಎಂಎ ಭವನದಲ್ಲಿ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಯಾಗಿ ಮಣಿಪಾಲ ಅಕಾಡಮಿ ಆಫ್ ಹೈಯರ್ ಎಜು ಕೇಷನ್ ಇದರ ಉಪಕುಲಪತಿ ಲೇ.ಜ. ಡಾ.ಎಂ.ಡಿ.ವೆಂಕಟೇಶ್, ವೈದ್ಯ ವೃತ್ತಿ ಯಲ್ಲಿ ಸೇವೆ ಸಲ್ಲಿಸುತ್ತಿರುವ ಡಾ.ಹರಿಶ್ಚಂದ್ರ ಆಚಾರ್ಯ, ಡಾ.ಆರ್.ಎನ್. ಭಟ್, ಡಾ.ರಮಾ ವಿ.ಶೆಟ್ಟಿ ಅವರನ್ನು ಸನ್ಮಾನಿಸಿದರು.
ಐಎಂಎ ಅಧ್ಯಕ್ಷ ಡಾ.ಕಲ್ಯಾ ವಿನಾಯಕ್ ಶೆಣೈ ಸ್ವಾಗತಿಸಿದರು. ಡಾ.ಸಂದೀಪ್ ಶೆಣೈ ಸನ್ಮಾನಿತರ ಪರಿಚಯ ಮಾಡಿದರು. ಗೌರವ ಕಾರ್ಯದರ್ಶಿ ಡಾ.ಗಣಪತಿ ಹೆಗ್ಡೆ ವರದಿ ಮಂಡಿಸಿದರು. ಕೋಶಾಧಿಕಾರಿ ಡಾ.ಶರತ್ಚಂದ್ರ ರಾವ್ ವಂದಿಸಿ ದರು. ಡಾ.ರಾಜಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು.
Next Story