ಕುಂಭಾಸಿ: ಕೊರಗ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಸನ್ಮಾನ

ಕುಂದಾಪುರ : ದಿ.ಮೀರಾ ಮುರುಡೇಶ್ವರ ಸ್ಮರಣಾರ್ಥವಾಗಿ ಕುಂಭಾಶಿ ಮಕ್ಕಳ ಮನೆಯಲ್ಲಿ ಈ ಬಾರಿ ಉಡುಪಿ ಜಿಲ್ಲೆಯಲ್ಲಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಕೊರಗ ಸಮುದಾಯದ ವಿದ್ಯಾರ್ಥಿಗಳಾದ ಅಖಿಲೇಶ್, ಪ್ರಜ್ಞಾ, ದೀಕ್ಷಾ, ಸುಶನ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ದಿ.ಮೀರಾ ಅವರ ಕುಟುಂಬಸ್ಥರಾದ ಜಿ.ಎಸ್. ಮುರ್ಡೇಶ್ವರ್, ಪದ್ಮಾ, ಸುರೇಂದ್ರ ಹಾಗೂ ಕೊರಗ ಸಮುದಾಯದ ಮುಖಂಡ ರಾದ ಮಂಜುನಾಥ್, ಶುಭಾಷ್ ಶಿರಸಿ, ಗಣೇಶ್ ವಿ.ಕುಂದಾಪುರ, ಶೇಖರ್ ಮರವಂತೆ, ಪ್ರಮೋದ್ ಹೊನ್ನಾವರ ಮತ್ತಿತರರು ಉಪಸ್ಥಿತರಿದ್ದರು.
ಗಣೇಶ್ ವಿ. ಸ್ವಾಗತಿಸಿದರು. ವಿನೀತಾ ವಂದಿಸಿದರು. ಲಕ್ಷ್ಮಣ್ ಬೈಂದೂರು ಕಾರ್ಯಕ್ರಮ ನಿರೂಪಿಸಿದರು.
Next Story