ಪರ್ಕಳ: ರಸ್ತೆಬದಿಯ ಮನೆ ಮೇಲೆ ಉರುಳಿದ ಕಂಟೈನರ್ ಲಾರಿ
ಉಡುಪಿ, ಜು.4: ಪರ್ಕಳದ ಕಾಂಕ್ರಿಟ್ ರಸ್ತೆಯಿಂದ ಡಾಮರು ರಸ್ತೆಗೆ ತಿರುಗುವ ಕೆಳಪರ್ಕಳದ ತಿರುವಿನಲ್ಲಿ ಕಂಟೈನರ್ ಲಾರಿಯೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ಮನೆಯ ಮೇಲೆ ಮಗುಚಿ ಬಿದ್ದ ಘಟನೆ ಜು.3ರಂದು ರಾತ್ರಿ ವೇಳೆ ನಡೆದಿದೆ.
ಪರ್ಕಳದಿಂದ ಗೋವಾ ಕಡೆಗೆ ರದ್ದಿ ಪೇಪರ್ ಸಾಗಿಸುತ್ತಿದ್ದ ಕಂಟೈನರ್, ಚಾಲಕನ ನಿಯಂತ್ರಣ ತಪ್ಪಿ ರಸ್ತೆಬದಿಯ ಶೆಣೈ ಕಂಪೌಂಡ್‌ನ ಮನೆಯ ಮೇಲೆ ಮಗುಚಿ ಬಿತ್ತೆನ್ನಲಾಗಿದೆ. ಈ ಮನೆಯಲ್ಲಿ ಸದ್ಯ ಯಾರು ಕೂಡ ವಾಸವಾಗಿಲ್ಲ ಎಂದು ತಿಳಿದುಬಂದಿದೆ.
ಒಂದು ತಿಂಗಳ ಹಿಂದೆ ಇದೇ ಪ್ರದೇಶದಲ್ಲಿ ಟ್ಯಾಂಕರೊಂದು ಉರುಳಿ ಬಿದ್ದಿತ್ತು. ಈ ಭಾಗದಲ್ಲಿ ಸೂಕ್ತ ದಾರಿದೀಪದ ವ್ಯವಸ್ಥೆ ಆಗಬೇಕು ಮತ್ತು ರಿಫ್ಲೆಕ್ಟರ್ ನಾಮಫಲಕ ಅಳವಡಿಸಬೇಕು ಎಂದು ಸ್ಥಳೀಯ ಒತ್ತಾಯಿಸಿದ್ದಾರೆ.
Next Story