ತಾಜುಲ್ ಉಲಮಾ ರಿಲೀಫ್ ಅಂಡ್ ಚಾರಿಟಬಲ್ ಟ್ರಸ್ಟ್ (ರಿ) ವತಿಯಿಂದ ವಿಧವೆಗೊಂದು ಮನೆ ಹಸ್ತಾಂತರ

ಬಂಟ್ವಾಳ (ಜು.4) : ತಾಜುಲ್ ಉಲಮಾ ರಿಲೀಫ್ ಮತ್ತು ಚಾರಿಟಬಲ್ ಟ್ರಸ್ಟ್ (ರಿ) ದಕ್ಷಿಣ ಕನ್ನಡ ಇದರ ಅಧೀನದಲ್ಲಿ, "ವಿಧವೆಗೊಂದು ಮನೆ" ಅಭಿಯಾನದಡಿ ಕಾವಳಕಟ್ಟೆ ಪರಿಸರದಲ್ಲಿ ನಿರ್ಮಿಸಿದ "ತಾಜುಲ್ ಉಲಮಾ ಮಂಝಿಲ್ ( 2) ಮನೆಯನ್ನು ಫಲಾನುಭವಿ ವಿಧವೆಗೆ ಹಸ್ತಾಂತರಿಸುವ ಕಾರ್ಯಕ್ರಮ ಕಾವಳಕಟ್ಟೆ ಕೈಲಾರ್ ಪರಿಸರದಲ್ಲಿ ಸೋಮವಾರ ನಡೆಯಿತು.
ಸೆಯ್ಯಿದ್ ಅಬ್ದುಲ್ ರಹಮಾನ್ ಸಾದಾತ್ ತಂಙಲ್ ಸಹಾಯ ಖಾಝಿ ಬೆಳ್ತಂಗಡಿ , ಫ಼ಝಲ್ ರಝ್ವಿ ಹಾಗೂ ಹಮೀದ್ ಫ಼ೈಝಿ ಮನೆಯನ್ನು ಉದ್ಘಾಟಿಸಿ, ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ, ಟ್ರಸ್ಟ್ ಅಧ್ಯಕ್ಷರಾದ ಮುಹಮ್ಮದ್ ಇಕ್ಬಾಲ್ ವಗ್ಗ, ಟ್ರಸ್ಟಿಗಳಾದ ಅಬ್ದುಲ್ ರಝಾಕ್ ಸಖಾಫಿ ಮಡಂತ್ಯಾರ್,ರಾಝಿಕ್ ಸಾಲಿತ್ತೂರು ,ದೂಮಲಿಕೆ ಖತೀಬರಾದ ಆದಂ ಮುಸ್ಲಿಯಾರ್ , ಅಬುಸಾಲಿ ಎನ್ ಸಿ ರೋಡು , ಅಬುಬಕ್ಕರ್ ಮದ್ದ, ಮಸೂದ್ ಸಹದಿ, ಅಬ್ದುಲ್ ಲತೀಫ಼್ ಇ ಕೆ ಸೇರಿದಂತೆ ಹಲವಾರು ಉಲಮಾ ಉಮರಾ ನಾಯಕರು ಹಾಗೂ ದಾನಿಗಳು ಉಪಸ್ಥಿತರಿದ್ದರು.

Next Story