Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಉಕ್ರೇನ್ ಮೇಲಿನ ಪ್ರಹಾರ ಮುಂದುವರಿಸುವಂತೆ...

ಉಕ್ರೇನ್ ಮೇಲಿನ ಪ್ರಹಾರ ಮುಂದುವರಿಸುವಂತೆ ಸೇನೆಗೆ ರಶ್ಯ ಅಧ್ಯಕ್ಷರ ಆದೇಶ

ವಾರ್ತಾಭಾರತಿವಾರ್ತಾಭಾರತಿ4 July 2022 10:39 PM IST
share
ಉಕ್ರೇನ್ ಮೇಲಿನ ಪ್ರಹಾರ ಮುಂದುವರಿಸುವಂತೆ ಸೇನೆಗೆ ರಶ್ಯ ಅಧ್ಯಕ್ಷರ ಆದೇಶ

ಮಾಸ್ಕೋ, ಜು.4: ರಶ್ಯಾದ ಸೇನೆ ಉಕ್ರೇನ್ ನ ಲುಹಾಂಸ್ಕ್ ವಲಯದ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿರುವುದನ್ನು ಸೋಮವಾರ ದೃಢಪಡಿಸಿರುವ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಉಕ್ರೇನ್ ಮೇಲಿನ ಪ್ರಹಾರವನ್ನು ಯೋಜಿತ ರೀತಿಯಲ್ಲಿ ಮುಂದುವರಿಸಿ ಗುರಿ ತಲುಪುವಂತೆ ರಕ್ಷಣಾ ಸಚಿವರಿಗೆ ಆದೇಶ ನೀಡಿದ್ದಾರೆ ಎಂದು ವರದಿಯಾಗಿದೆ.

ಪೂರ್ವ ತುಕಡಿ ಮತ್ತು ಪಶ್ಚಿಮ ತುಕಡಿಯ ಸಹಿತ ಸೇನೆಯ ಎಲ್ಲಾ ಘಟಕಗಳೂ ಈ ಹಿಂದೆ ಅನುಮೋದಿಸಲ್ಪಟ್ಟ ಯೋಜನೆಯಂತೆ ತಮ್ಮ ಕಾರ್ಯವನ್ನು ಮುಂದುವರಿಸಬೇಕು. ಲುಹಾಂಸ್ಕ್ನಲ್ಲಿ ನಡೆದಂತೆ ಎಲ್ಲವೂ ಯೋಜಿತ ರೀತಿಯಲ್ಲಿಯೇ ಸಾಗುವುದೆಂದು ನಿರೀಕ್ಷಿಸುವುದಾಗಿ ರಕ್ಷಣಾ ಸಚಿವ ಸೆರ್ಗೈ ಶೊಯಿಗುರನ್ನು ಉಲ್ಲೇಖಿಸಿ ಪುಟಿನ್ ಸೂಚಿಸಿದ್ದಾರೆ. ಲುಹಾಂಸ್ಕ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ತುಕಡಿಗೆ ವಿರಾಮ ನೀಡಿ, ಆ ಪ್ರದೇಶದಲ್ಲಿ ಯುದ್ಧಸಾಮರ್ಥ್ಯವನ್ನು ಮರುಸಂಘಟಿಸುವಂತೆಯೂ ಅವರು ಸೂಚಿಸಿದ್ದಾರೆ.

ರಾಜಧಾನಿ ಕೀವ್ ವಶಪಡಿಸಿಕೊಳ್ಳುವ ಆರಂಭಿಕ ಯೋಜನೆಯನ್ನು ಕೈಬಿಟ್ಟ ಬಳಿಕ ರಶ್ಯಾವು ಪೂರ್ವ ಉಕ್ರೇನ್ನ ಡೊನೆಟ್ಸ್ಕ್ ಮತ್ತು ಲುಹಾಂಸ್ಕ್ ವಲಯದ ಮೇಲೆ ಪೂರ್ಣ ನಿಯಂತ್ರಣದತ್ತ ಗಮನ ಕೇಂದ್ರೀಕರಿಸಿದೆ. 

ಅಮೆರಿಕ ಸ್ವಾತಂತ್ರ್ಯ ದಿನದಂದು ಬೈಡನ್ ರನ್ನು ಅಭಿನಂದಿಸುವುದಿಲ್ಲ: ಪುಟಿನ್ 

ಅಮೆರಿಕದ ಸ್ವಾತಂತ್ರ್ಯ ದಿನಾಚರಣೆಯಂದು ಅಧ್ಯಕ್ಷ ಜೋ ಬೈಡನ್ರನ್ನು ಪುಟಿನ್ ಅಭಿನಂದಿಸುವುದಿಲ್ಲ ಎಂದು ರಶ್ಯ ಅಧ್ಯಕ್ಷರ ಕಚೇರಿಯ ಹೇಳಿಕೆ ತಿಳಿಸಿದೆ. ಜುಲೈ 4 ಅಮೆರಿಕದ ಸ್ವಾತಂತ್ರ್ಯ ದಿನವಾಗಿದೆ. ರಶ್ಯದ ವಿಷಯದಲ್ಲಿ ಅಮೆರಿಕದ ಸ್ನೇಹಭಾವವಿಲ್ಲದ ಕ್ರಮಗಳ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಈ ವರ್ಷ ಅಭಿನಂದನೆ ಸಲ್ಲಿಸುವುದು ಸೂಕ್ತ ಎಂದು ಅನಿಸುವುದಿಲ್ಲ. ಅಮೆರಿಕದ ಸ್ನೇಹಭಾವವಿಲ್ಲದ ನೀತಿ ಇದಕ್ಕೆ ಕಾರಣ ಎಂದು ರಶ್ಯ ಅಧ್ಯಕ್ಷರ ಕಚೇರಿಯ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ. 

ಪೂರ್ವ ಉಕ್ರೇನ್ನಲ್ಲಿ ನಿರ್ಣಾಯಕ ಮುನ್ನಡೆ: ರಶ್ಯ 

ಉಕ್ರೇನ್ನ ಅತ್ಯಂತ ಆಯಕಟ್ಟಿನ ನಗರ ಲಿಸಿಚಾಂಸ್ಕ್ ಅನ್ನು ತನ್ನ ಪಡೆ ವಶಕ್ಕೆ ಪಡೆದಿದ್ದು ಈ ಮೂಲಕ ಲುಗಾಂಸ್ಕ್ ವಲಯದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದಂತಾಗಿದೆ. ಇದು ಪೂರ್ವ ಉಕ್ರೇನ್ ಮೇಲೆ ನಿಯಂತ್ರಣ ಸಾಧಿಸುವ ನಿಟ್ಟಿನಲ್ಲಿ ನಿರ್ಣಾಯಕ ಮುನ್ನಡೆಯಾಗಿದೆ ಎಂದು ರಶ್ಯ ಪ್ರತಿಪಾದಿಸಿದೆ.

ಉಕ್ರೇನ್ ವಿರುದ್ಧ ಕಳೆದ 4 ತಿಂಗಳಿಂದ ನಡೆದಿದ್ದ ಯುದ್ಧದಲ್ಲಿ ಇದೇ ಪ್ರಥಮ ಬಾರಿಗೆ ನಿರ್ಣಾಯಕ ಮುನ್ನಡೆ ಸಾಧಿಸಲಾಗಿದೆ. ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ಆಯಕಟ್ಟಿನ ಲುಹಾಂಸ್ಕ್ ವಲಯದಲ್ಲಿ ಉಕ್ರೇನ್ನ ನಿಯಂತ್ರಣದಲ್ಲಿದ್ದ ಕಟ್ಟಕಡೆಯ ನಗರ ಲಿಸಿಚಾಂಸ್ಕ್ ಕೈವಶವಾಗಿರುವುದರಿಂದ ಪೂರ್ವ ವಲಯದಲ್ಲಿ ಗಮನಾರ್ಹ ಮೇಲುಗೈ ಸಾಧ್ಯವಾಗಿದೆ ಎಂದು ರಶ್ಯದ ವಿದೇಶಾಂಗ ಸಚಿವಾಲಯ ಹೇಳಿದೆ.

ಲಿಸಿಚಾಂಸ್ಕ್ ನಗರದಿಂದ ತಮ್ಮ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಲಾಗಿದೆ. ಆ ನಗರದಲ್ಲಿ ನಮ್ಮ ಯೋಧರ ಸಂಖ್ಯೆ ಕಡಿಮೆ ಇರುವುದರಿಂದ ವೈರಿಗಳಿಂದ ನಮ್ಮ ಯೋಧರು ಮುತ್ತಿಗೆಗೆ ಒಳಗಾಗುವುದನ್ನು ತಪ್ಪಿಸಲು ಈ ಕ್ರಮ ಅನಿವಾರ್ಯವಾಗಿತ್ತು ಎಂದು ಲುಹಾಂಸ್ಕ್ ಗವರ್ನರ್ ಸೆರ್ಹಿಹ್ ಹೈದಯ್ ಸೋಮವಾರ ಹೇಳಿದ್ದಾರೆ.

ಇದೀಗ ರಶ್ಯ ಸೇನೆ ಡೊನೆಟ್ಸ್ಕ್ ವಲಯದ ಸಿವೆರ್ಸ್ಕ್, ಫೆಡೊರಿವ್ಕ ಮತ್ತು ಬಾಖ್ಮುಟ್ ನಗರದತ್ತ ಗಮನ ಕೇಂದ್ರೀಕರಿಸಿದೆ. ಅಲ್ಲದೆ ಸ್ಲೊವಿಯಾಂಸ್ಕ್ ಮತ್ತು ಕ್ರಮಟೊರ್ಸ್ಕ್ ನಗರಗಳ ಮೇಲೆ ತೀವ್ರ ವಾಯುದಾಳಿ ಮುಂದುವರಿದಿದೆ ಎಂದು ಉಕ್ರೇನ್ ಸೇನೆ ಹೇಳಿದೆ

. ಈ ಮಧ್ಯೆ, ಉಕ್ರೇನ್ನ ಸ್ಲೊವಿಯಾಂಸ್ಕ್ ನಗರದ ಮೇಲೆ ರಶ್ಯ ಪಡೆ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಮಗು ಸಹಿತ 6 ಮಂದಿ ಮೃತಪಟ್ಟಿದ್ದು ಇತರ 15 ಮಂದಿ ಗಾಯಗೊಂಡಿದ್ದಾರೆ. ಹಲವು ಅಂಗಡಿಗಳಿಗೆ ಹಾನಿಯಾಗಿರುವುದಾಗಿ ಉಕ್ರೇನ್ನ ಅಧಿಕಾರಿಗಳು ಹೇಳಿದ್ದಾರೆ. ಈ ಮಧ್ಯೆ, ಉಕ್ರೇನ್ನ ಗಡಿಯಲ್ಲಿರುವ ರಶ್ಯದ ಬೆಲ್ಗೊರೊಡ್ ನಗರದ ಮೇಲೆ ಉಕ್ರೇನ್ 3 ಕ್ಷಿಪಣಿಗಳನ್ನು ಉಡಾಯಿಸಿದ್ದು ಅವನ್ನು ತಡೆಯಲಾಗಿದೆ ಎಂದು ಬೆಲಾರಸ್ ಹೇಳಿದೆ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X