ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ಭೂಕಂಪ

ಸಾಂದರ್ಭಿಕ ಚಿತ್ರ
ಪೋರ್ಟ್ಬ್ಲೆರ್ : ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಮಂಗಳವಾರ ಮುಂಜಾನೆ 5.57ಕ್ಕೆ ಭೂಕಂಪ ಸಂಭವಿಸಿದೆ.
ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 5.0ರಷ್ಟಿತ್ತು. ಭೂಕಂಪದ ಕೇಂದ್ರ ಪೋರ್ಟ್ಬ್ಲೆರ್ ನಿಂದ 215 ಕಿಲೋ ಮೀಟರ್ ದೂರದಲ್ಲಿತ್ತು ಎಂದು ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರದ ಹೇಳಿಕೆಯನ್ನು ಉಲ್ಲೇಖಿಸಿ ಎಎನ್ಐ ವರದಿ ಮಾಡಿದೆ.
ಸೋಮವಾರ ಮಧ್ಯಾಹ್ನ 3.02ಕ್ಕೆ ಪೋರ್ಟ್ಬ್ಲೆರ್ ನಿಂದ ಆಗ್ನೇಯಕ್ಕೆ 256 ಕಿಲೋಮೀಟರ್ ದೂರದಲ್ಲಿ 4.4 ತೀವ್ರತೆಯ ಭೂಕಂಪ ಸಂಭವಿಸಿತ್ತು.
ಘಟನೆಯಲ್ಲಿ ಯಾವುದೇ ಜೀವಹಾನಿ ಅಥವಾ ಆಸ್ತಿಪಾಸ್ತಿಗೆ ಹಾನಿಯಾಗಿರುವ ವರದಿಗಳು ಬಂದಿಲ್ಲ.
Next Story