ಕುಂದಾಪುರ: ಗಾಂಜಾ, ಎಂಡಿಎಂಎ ಡ್ರಗ್ಸ್ ಸಹಿತ ಇಬ್ಬರ ಬಂಧನ

ಬೈಂದೂರು: ಸರ್ಕಲ್ ಇನ್ಸ್‌ಪೆಕ್ಟರ್ ಸಂತೋಷ್ ಕಾಯ್ಕಿಣಿ ಅವರಿಗೆ ಬಂದ ಖಚಿತ ವರ್ತಮಾನದಂತೆ ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ. ಅವರ ಉಪಸ್ಥಿತಿಯಲ್ಲಿ ಗಾಂಜಾ ಹಾಗೂ ಎಂಡಿಎಂಎ ಡ್ರಗ್ಸ್ ಸಹಿತ ಇಬ್ಬರನ್ನು ಬಂಧಿಸಿರುವ ಘಟನೆ ಬೈಂದೂರು ರಾಹುತನಕಟ್ಟೆ ಎಂಬಲ್ಲಿ ಮಂಗಳವಾರ ನಡೆದಿದೆ.
ಭಟ್ಕಳ ನಿವಾಸಿ ಅಬ್ದುಲ್ ರಹ್ಮಾನ್ (31), ಶಿರ್ವ ನಿವಾಸಿ ಅಬ್ದುಲ್ ಸಮದ್ (30) ಬಂಧಿತರಾಗಿದ್ದು, ಇವರಿಬ್ಬರು ಈ ಮಾದಕ ವಸ್ತುವನ್ನು ಸಲೀಮ್ ಮಂಚಿ ಎನ್ನುವಾತನಿಂದ ಖರೀದಿಸಿ ತಂದಿದ್ದಾಗಿ ತನಿಖೆ ವೇಳೆ ಬಾಯ್ಬಿಟ್ಟಿದ್ದಾರೆ. ಆರೋಪಿಗಳಿಬ್ಬರಿಂದ 30 ಗ್ರಾಂ ತೂಕದ 25 ಸಾವಿರ ರೂ. ಮೌಲ್ಯದ ಗಾಂಜಾ, 11.420 ಗ್ರಾಂ ತೂಕದ 11 ಸಾವಿರ ರೂ. ಮೌಲ್ಯದ ಎಂಡಿಎಂಎ ಹರಳು, 4 ಲಕ್ಷ ಮೌಲ್ಯದ ಕಾರು, ಮೊಬೈಲ್ ಫೋನುಗಳ, ತೂಕದ ಮೆಷಿನ್, 1080 ರೂ. ನಗದು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಇಬ್ಬರು ಹಾಗೂ ಮಂಚಿ ಸಲೀಮ್ ಸೇರಿ ಮೂರು ಮಂದಿ ವಿರುದ್ಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story