ಗ್ಯಾಸ್ ಬೆಲೆ ಏರಿಕೆ; ಜನರ ಗಾಯದ ಮೇಲೆ ಬರೆ: ವರೋನಿಕಾ
ಉಡುಪಿ : ಅಡುಗೆ ಅನಿಲ ಬೆಲೆ ಮತ್ತೆ ೫೦ರೂ. ಏರಿಕೆ ಮಾಡುವ ಮೂಲಕ ಬಿಜೆಪಿ ಸರಕಾರ ಜನರ ಗಾಯದ ಮೇಲೆ ಬರೆ ಎಳೆದಿದೆ ಎಂದು ಕೆಪಿಸಿಸಿ ಪ್ಯಾನಲಿಸ್ಟ್ ವೆರೋನಿಕಾ ಕಾರ್ನೆಲಿಯೋ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನ ಆರ್ಥಿಕ ಸಂಕಷ್ಟದಲ್ಲಿ ಇರುವಾಗ ದಿನನಿತ್ಯ ಬಳಕೆಯ ಅಡುಗೆ ಅನಿಲದ ಬೆಲೆಯನ್ನು ಏಕಾಏಕಿ ೫೦ ರೂ. ಏರಿಸಿರುವುದು ಖಂಡನೀಯ. ಜನ ಕೆಲಸ ಗಳಿಲ್ಲದೆ ಪರದಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಬೆಲೆ ಏರಿಸುವ ಸರಕಾರಕ್ಕೆ ಕಣ್ಣು ಕಿವಿ ಯಾವುದೂ ಇಲ್ಲವೇ? ಜನರಿಂದ ಆಯ್ಕೆಯಾದ ಸರಕಾರ ಯಾಕೆ ಜನರನ್ನು ಈ ರೀತಿ ಲೂಟಿ ಮಾಡುತ್ತಿದೆಂದು ಅವರು ಹೇಳಿಕೆಯಲ್ಲಿ ಪ್ರಶ್ನಿಸಿದ್ದಾರೆ.
Next Story





