ರಾಜ್ಯಸಭೆಗೆ ಹೆಗ್ಗಡೆ : ಪೇಜಾವರಶ್ರೀ ಹರ್ಷ

ಉಡುಪಿ: ಕೇಂದ್ರ ಸರಕಾರ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ಡಾ ಡಿ ವೀರೇಂದ್ರ ಹೆಗ್ಗಡೆಯವರನ್ಬು ರಾಜ್ಯಸಭೆ ಸದಸ್ಯರನ್ನಾಗಿ ನಾಮನಿರ್ದೇಶನಗೊಳಿಸಿರುವುದಕ್ಕೆ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು ಸಂತಸ ವ್ಯಕ್ತಪಡಿಸಿದ್ದಾರೆ .
ಶ್ರೀ ಕ್ಷೇತ್ರದ ಮೂಲಕ ರಾಷ್ಟ್ರದ ಏಳಿಗೆಗೆ ಬಹುಮುಖಿ ಹಾಗೂ ಅತ್ಯಂತ ಪರಿಣಾಮಕಾರಿಯಾದ ಕೊಡುಗೆ ಮತ್ತು ಕೈಂಕರ್ಯಗಳನ್ನು ನಿರ್ವಹಿಸುತ್ತಿರುವ ಹೆಗ್ಗಡೆಯವರ ನಿಯುಕ್ತಿಯಿಂದ ರಾಜ್ಯಸಭೆಯ ಘನತೆ ನೂರ್ಮಡಿಸಿದಂತಾ ಗಿದೆ . ನಾವು ಮಾತ್ರವಲ್ಲ, ಇಡೀ ನಾಡೇ ಈ ಆಯ್ಕೆಯಿಂದ ಸಂತಸಪಡುವಂತಾಗಿದೆ. ಹೆಗ್ಗಡೆಯವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಅವರಿಗೆ ಶ್ರೀಕೃಷ್ಣನ ಪೂರ್ಣಾನುಗ್ರವನ್ನು ಪ್ರಾರ್ಥಿಸುತ್ತೇವೆ ಎಂದು ಶ್ರೀಗಳು ಅಭಿನಂದನಾ ಸಂದೇಶದಲ್ಲಿ ತಿಳಿಸಿದ್ದಾರೆ .
Next Story