ಚಂಡಿಗಢ: ಶಾಲಾ ಮಕ್ಕಳ ಮೇಲೆ ಬಿದ್ದ ಬೃಹತ್ ಮರ, ಓರ್ವ ವಿದ್ಯಾರ್ಥಿ ಸಾವು, ಹಲವರಿಗೆ ಗಾಯ
![ಚಂಡಿಗಢ: ಶಾಲಾ ಮಕ್ಕಳ ಮೇಲೆ ಬಿದ್ದ ಬೃಹತ್ ಮರ, ಓರ್ವ ವಿದ್ಯಾರ್ಥಿ ಸಾವು, ಹಲವರಿಗೆ ಗಾಯ ಚಂಡಿಗಢ: ಶಾಲಾ ಮಕ್ಕಳ ಮೇಲೆ ಬಿದ್ದ ಬೃಹತ್ ಮರ, ಓರ್ವ ವಿದ್ಯಾರ್ಥಿ ಸಾವು, ಹಲವರಿಗೆ ಗಾಯ](https://www.varthabharati.in/sites/default/files/images/articles/2022/07/8/341684-1657270775.png)
Photo : NDTV
ಚಂಡಿಗಢ: ಶಾಲಾ ಆವರಣದಲ್ಲಿ ಬೃಹತ್ ಮರವೊಂದು ಉರುಳಿ ಬಿದ್ದ ಪರಿಣಾಮ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ಚಂಡಿಗಢದಲ್ಲಿ ಶುಕ್ರವಾರ ನಡೆದಿದೆ. ಶಾಲೆಯು ಸೆಕ್ಟರ್ 9 ಪ್ರದೇಶದಲ್ಲಿದೆ.
ಶಾಲೆಯಲ್ಲಿ ಊಟದ ಸಮಯದಲ್ಲಿ ಈ ಅವಘಡ ಸಂಭವಿಸಿದೆ. ಈ ದೊಡ್ಡ ಮರದ ಬಳಿ ಅನೇಕ ಮಕ್ಕಳು ಆಟವಾಡುತ್ತಿದ್ದಾಗ ಏಕಾಏಕಿ ಮರ ಮಕ್ಕಳ ಮೇಲೆ ಉರುಳಿ ಬಿದ್ದಿದೆ.
ಗಾಯಗೊಂಡ ವಿದ್ಯಾರ್ಥಿಗಳನ್ನು ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Next Story