ರಾಜ್ಯ ಕಾಂಗ್ರೆಸ್ ಸಂವಹನ, ಸಾಮಾಜಿಕ ಜಾಲತಾಣದ ಅಧ್ಯಕ್ಷರನ್ನಾಗಿ ಪ್ರಿಯಾಂಕ್ ಖರ್ಗೆ ನೇಮಕ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸಂವಹನ ಮತ್ತು ಸಾಮಾಜಿಕ ಜಾಲತಾಣದ ಅಧ್ಯಕ್ಷರನ್ನಾಗಿ ಕಾಂಗ್ರೆಸ್ ಮುಖಂಡ ಪ್ರಿಯಾಂಕ್ ಖರ್ಗೆ ಅವರನ್ನು ಕಾಂಗ್ರೆಸ್ ನೇಮಕ ಮಾಡಿದೆ.
ಸಹ ಅಧ್ಯಕ್ಷರನ್ನಾಗಿ ಮನ್ಸೂರ್ ಅಲಿಖಾನ್, ಮುಖ್ಯ ಕಾಂಗ್ರೆಸ್ ವಕ್ತಾರ, ಸಂಚಾಲಕರಾಗಿ ಎಂಎಲ್ ಸಿ ನಾಗರಾಜ್ ಯಾದವ್, ಮುಖ್ಯ ಉಪಾಧ್ಯಕ್ಷರನ್ನಾಗಿ ಎಂಎಲ್ ಸಿ ದಿನೇಶ್ ಗೂಳಿಗೌಡ, ಮಾಜಿ ಎಂಎಲ್ ಸಿ ರಮೇಶ್ ಬಾಬು ನೇಮಕ ಮಾಡಲಾಗಿದೆ.
ವಕ್ತಾರೆಯರು ಮತ್ತು ಪ್ರಧಾನ ಕಾರ್ಯದರ್ಶಿಗಳನ್ನಾಗಿ ಲಾವಣ್ಯ ಬಲ್ಲಾಳ್, ಕವಿತಾ ರೆಡ್ಡಿ, ಡಾ. ನಾಗಲಕ್ಷ್ಮೀ ಅವರನ್ನು ನೇಮಿಸಿದೆ.
ಕಾಂಗ್ರೆಸ್ ಅಧಿಕೃತ ಆದೇಶ ಹೊರಡಿಸಿದ್ದು, ಪ್ರಿಯಾಂಕ್ ಖರ್ಗೆ ಅವರು ಸಂತಸ ವಿಚಾರವನ್ನು ಹಂಚಿಕೊಂಡಿದ್ದಾರೆ.ನನ್ನ ಸಹೋದ್ಯೋಗಿಗಳು ಮತ್ತು ನನ್ನ ಪರವಾಗಿ, ಈ ನಿರ್ಣಾಯಕ ಘಟ್ಟದಲ್ಲಿ ಕಾಂಗ್ರೆಸ್ ಕಮ್ಯುನಿಕೇಷನ್ಸ್ ಇಲಾಖೆಯಲ್ಲಿ ನಮಗೆ ಪ್ರಮುಖ ಜವಾಬ್ದಾರಿಯನ್ನು ನೀಡುವ ಮೂಲಕ ನಮಗೆ ನೀಡಿದ ಅವಕಾಶ, ತೋರಿದ ವಿಶ್ವಾಸ ಮತ್ತು ನಂಬಿಕೆಗಾಗಿ ನಾನು ಕಾಂಗ್ರೆಸ್ ಹೈಕಮಾಂಡ್ ಗೆ ಧನ್ಯವಾದಗಳನ್ನು ಹೇಳುತ್ತೇನೆ ಎಂದು ಹೇಳಿದ್ದಾರೆ.







