ಕಲಬುರಗಿ: ಭೀಕರ ಅಪಘಾತದಲ್ಲಿ ಮೂವರು ಮೃತ್ಯು

ಕಲಬುರಗಿ: ಜೇವರ್ಗಿ ತಾಲೂಕಿನ ಕಟ್ಟಿ ಸಂಗಾವಿ ಬ್ರಿಡ್ಜ್ ಬಳಿ ಹಸನಾಪುರ ಕ್ರಾಸ್ ಹತ್ತಿರ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿಯಾಗಿ ಮೂವರು ಸಾವನ್ನಪ್ಪಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಆಕಾಶ್ ಬಡಿಗೇರ್(21), ಶಿವು ಮ್ಯಾಗೇರಿ(21), ಲಕ್ಷ್ಮಣ ಮಲ ಬಾಡಿ(18)ಮೃತಪಟ್ಟವರು ಎಂದು ತಿಳಿದು ಬಂದಿದೆ.
ಜೇವರ್ಗಿ ತಾಲೂಕಿನ ಹಿಪ್ಪರಗಾ ಎಸ್ ಎನ್ ಗ್ರಾಮದ ಮೂವರು ಯುವಕರು ದುರ್ಮರಣ ಹೊಂದಿದ್ದಾರೆ. ರಾತ್ರಿ 9ಗಂಟೆಯ ಸುಮಾರಿಗೆ ಹಸನಾಪುರ ಕ್ರಾಸ್ ಬಳಿ ಲಾರಿ ಕೆಟ್ಟು ನಿಂತಿತ್ತು ಎನ್ನಲಾಗಿದೆ.
Next Story





