Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಆರೆಸ್ಸೆಸ್ ಮತ್ತು ಸಮಾಜ, ಸತ್ಯ vs...

ಆರೆಸ್ಸೆಸ್ ಮತ್ತು ಸಮಾಜ, ಸತ್ಯ vs ಮಿಥ್ಯೆ

ಕಲ್ಲಚ್ಚು ಮಹೇಶ ಆರ್. ನಾಯಕ್ಕಲ್ಲಚ್ಚು ಮಹೇಶ ಆರ್. ನಾಯಕ್9 July 2022 12:11 AM IST
share
ಆರೆಸ್ಸೆಸ್ ಮತ್ತು ಸಮಾಜ, ಸತ್ಯ vs ಮಿಥ್ಯೆ

ದೇವನೂರರ ಪ್ರಸ್ತುತ ಕೃತಿ, ಸಿದ್ಧರಾಮಯ್ಯನವರ ಇತ್ತೀಚಿನ ಗಂಭೀರ ಮಾತು ಸೇರಿದಂತೆ ಹಲವು ಕಾರಣಗಳಿಂದ ಆರೆಸ್ಸೆಸ್ ಇದೀಗ ಮತ್ತೆ ಜನಮಾನಸದಲ್ಲಿ ಭಾರೀ ಚರ್ಚೆಯಲ್ಲಿದೆ. ಆರೆಸ್ಸೆಸ್ (ಸಂಘ) ಸಮಾಜದ ನಡುವೆ ಚರ್ಚೆಯ ವಿಷಯವಾಗಿ ಬೆಳೆದು ಬಂದಿರುವುದು ಇವತ್ತು ನಿನ್ನೆಯ ವಿದ್ಯಮಾನವೇನಲ್ಲ, ಬದಲಾಗಿ ಅದರ ಆರಂಭದಿಂದಲೂ ಸ್ವಾತಂತ್ರ್ಯಪೂರ್ವ ಮತ್ತು ನಂತರದ ಅನೇಕ ಕಾಲಘಟ್ಟದಲ್ಲಿ ಇದೊಂದು ನಿರಂತರವಾಗಿ ಬೆಳೆದು ಬಂದ ಪ್ರಕ್ರಿಯೆ. ಸುಮಾರು ಕಳೆದೊಂದು ದಶಕದಿಂದ ಸಂಘದ ಅನುಯಾಯಿ ವ್ಯವಸ್ಥೆಗಳು ರಾಜಕೀಯ ಪ್ರಾಬಲ್ಯದಿಂದ ಅಧಿಕಾರದ ಚುಕ್ಕಾಣಿ ಹಿಡಿದ ಮೇಲಂತೂ ಈ ಚರ್ಚೆ ವಿಶಾಲ ರೂಪ ಪಡೆದು ತನ್ಮೂಲಕ ಅದರ ಸತ್ಯ ಮತ್ತು ಸತ್ಯದಂತೆ ಕಾಣುವ ಮಿಥ್ಯೆಯ ದಶಾವತಾರವನ್ನು ಮೀರಿದ ಕಬಂಧಬಾಹುಗಳನ್ನು ಹಂತ ಹಂತವಾಗಿ ಹತ್ತು ಹಲವು ರೂಪದಲ್ಲಿ ಜನರೆದುರಿಗಿಡುತ್ತಿದೆ. ಸಂಘ ಹಿಂದೂಗಳ ಒಳಿತಿಗಾಗಿ ಮಾತ್ರ ಇರುವ ಸಂಸ್ಥೆ ಅಥವಾ ಸಂಘಟನೆ ಎಂದು ತನ್ನನ್ನು ತಾನು ಕರೆಸಿಕೊಂಡರೂ, ಖಂಡಿತವಾಗಿ ತನ್ನ ಅಸ್ತಿತ್ವದ ಯಕಶ್ಚಿತ್ ಒಂದು ದಿನವೂ ಸಹ ಅದು ಭಾರತದ ಸಮಗ್ರ ಹಿಂದೂಗಳ ಒಂದು ಸಂಘಟನೆ ಎಂದು ಅನ್ನಿಸಿಕೊಳ್ಳಲೇ ಇಲ್ಲ. ಒಂದು ವೇಳೆ ಹಾಗೇನಾದರೂ ಅನ್ನಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಸಂಘ ನಡೆಸಿ ಯಶಸ್ವಿಯಾಗಿರುತ್ತಿದ್ದರೆ ಹಿಂದೂಗಳ ಮಧ್ಯೆ ಇನ್ನೂ ಗಮನಾರ್ಹವಾಗಿ ಬೇರೂರಿರುವ ಜಾತಿ ಪದ್ಧತಿಯ ಕರಾಳತೆ ಅದೆಂದೋ ಮರೆಯಾಗಿಬಿಡುತ್ತಿತ್ತೇನೋ? ಹಾಗಾಗಿ ಸಂಘ ಬ್ರಾಹ್ಮಣ್ಯವನ್ನು ಪುಷ್ಟೀಕರಿಸುವ ‘ನಾವೆಲ್ಲ ಹಿಂದೂ-ಒಂದು’, ಎಂಬ ಆಕರ್ಷಕ ಸ್ಲೋಗನ್ ಜೊತೆಗಿನ ಒಂದು ಅತೀ ಚತುರ ಪಡೆಯಷ್ಟೇ. ಅದರ ಸತತ ನಾಯಕತ್ವದ ಚಿತ್ರಣವೇ ಇದಕ್ಕೆ ಸ್ಪಷ್ಟ ಉದಾಹರಣೆ. ಹೀಗೆಂದ ಮಾತ್ರಕ್ಕೆ ಸಂಘದ ಎಲ್ಲ ವ್ಯವಸ್ಥೆಗಳೂ ತಪ್ಪುಎಂಬ ಕಲ್ಪನೆಗೆ ನಾವು ಬಂದರೂ ಅದು ಅಪಾಯಕಾರಿ.

ವ್ಯವಸ್ಥಿತವಾಗಿ ಸಮಾಜದ, ಅದರಲ್ಲೂ ವಿಶೇಷವಾಗಿ ಹೆಚ್ಚಾಗಿ ತಳವರ್ಗದ ಮತ್ತು ಅತೀ ಸಾಮಾನ್ಯ ಜನವರ್ಗವನ್ನು ಶಿಸ್ತಿನ ಹೆಸರಿನೊಂದಿಗೆ ತನ್ನೆಡೆಗೆ ಸೆಳೆದು ಇದೇ ಸಮಾಜದಲ್ಲಿರುವ ಅತೀ ಧಾರ್ಮಿಕತೆಯ ಭಾವೋದ್ವೇಗದಂತಹ ಅಚಾತುರ್ಯದ ಜನರ ನಡುವಿನ (ಸಂಘದಂತೆ ಅದೊಂದು ಘೋರ ಬೆಳವಣಿಗೆ) ಸಂಪೂರ್ಣ ಲಾಭಪಡೆದು ತನ್ನ ಬೇಳೆಯನ್ನು ಎಲ್ಲ ಕ್ಷೇತ್ರಗಳಲ್ಲೂ ಬೇಯಿಸಿಕೊಳ್ಳುತಿರುವ ಸಂಘದ ಮೋಡಿ ಅನುಕರಣಿಯವೇ! ದೇಶದ ದಶಕಗಳ ಅಂತರ ರಾಜಕೀಯ ಏರಿಳಿತಗಳ ನಡುವೆಯೂ ಸಂಘ ಉಳಿದು ಬೆಳೆದು ಇಂದಿಗೂ ಗಟ್ಟಿಯಾಗಿ ನಿಂತಿದೆ ಎಂದಾದರೆ ಆ ವ್ಯವಸ್ಥೆಯೊಳಗಿನ ಒಂದಿಷ್ಟು ಕಾರ್ಯಯೋಜನೆಗಳು, ಅಗತ್ಯತೆ ಮತ್ತು ಒಂದು ಕಾಲದ ಬೆರಳೆಣಿಕೆಯಷ್ಟು ಮಂದಿಯ ನಿಸ್ವಾರ್ಥ ಸೇವೆಯೂ ಇಲ್ಲದಿಲ್ಲ. ಆದರೆ ಇದೀಗ ಅದು ಯಾವುದೂ ದುರ್ಬೀನು ಹಾಕಿ ಹುಡುಕಿದರೂ ಸಿಗದಷ್ಟು ಮರೆಯಾಗಿದೆ. ಅದರ ಮೈಮನಗಳಲ್ಲಿ ರಾಜಕೀಯ ಅಧಿಕಾರದ ಸುಪ್ಪತ್ತಿಗೆಯಲ್ಲಿ. ಸಂಘದ ನೆಲೆಯಿಂದ ಜೀವನೋಪಾಯ ಆರಂಭಿಸಿ ಕಂಡವರ ಮನೆಯಲ್ಲಿ ಉಂಡವರು ಇಂದು ಊರೆಲ್ಲಾ ಕೊಂಡಾಡುವಂತೆ ಸಿರಿವಂತರಾಗಿ ಭವ್ಯ ಬಂಗಲೆಯಲ್ಲಿ ಬಂಗಾರದ ತಟ್ಟೆಯೆದುರು ಉಣ್ಣುವಂತಾಗಿದ್ದಾರೆ.

ಒಂದು ವೇಳೆ ಸಂಘ ಇಷ್ಟೊಂದು ಬೆಳೆದುನಿಲ್ಲದಿದ್ದರೆ ನಿಜವಾಗಿಯೂ ಹಿಂದೂಗಳಿಗೆ ಸಮಗ್ರವಾಗಿ ಬೇಕಾಗಿದ್ದ ರಾಜಕೀಯೇತರ ಮನಸ್ಥಿತಿಯ ಶುದ್ಧ ಸಂಘಟನೆಯೊಂದು ಹುಟ್ಟಿಬರುತ್ತಿತ್ತೇನೋ ಎಂಬ ಅನುಮಾನ ಅನೇಕ ಪ್ರಾಜ್ಞರಲ್ಲಿ ಇನ್ನೂ ಇದೆ. ಇದಕ್ಕೂ ಅವಕಾಶವಿಲ್ಲದಂತೆ ಸಂಘ ಬಿತ್ತಿದ ಬೀಜ ಇದೀಗ ಫಲವತ್ತಾದ ಬೆಳೆ ಅವರಿಗೆ ನೀಡುತ್ತಿದೆ, ಹಲವು ಬಾರಿ ಸಾಮಾಜಿಕ ಸ್ವಾಸ್ಥ್ಯವನ್ನೇ ಪ್ರಶ್ನಿಸುತ್ತಾ ಕೇವಲ ರಾಜಕೀಯ ಗೆಲುವಿನ ಅಜೆಂಡಾದೊಂದಿಗೆ. ಆರೆಸ್ಸೆಸ್ ಇವತ್ತಿಗೂ ನೈಜ ಹಿಂದೂಗಳ ಪ್ರತಿಪಾದಕ ಎಂದು ಆಗಬೇಕಾದರೆ ಈ ಎಲ್ಲ ನೆಲೆಯಲ್ಲಿ ತನ್ನನ್ನು ತಾನು ಒಮ್ಮೆ ಆತ್ಮ ವಿಮರ್ಶೆಗೆ ಒಳಪಡಿಸಿದರೆ ಇರುವ ಸತ್ಯದ ಜತೆಗೆ ಮಿಥ್ಯೆಯ ರೂಪ ಕಳಚಿ ಮಾನವತೆಯ ರೂಪದಲ್ಲಿ ಹೊಸ ಜನ್ಮ ಪಡೆದರೆ ನಿಜಾರ್ಥದಲ್ಲಿ ಕಿಂಚಿತ್ತೂ ಲಾಭವಿಲ್ಲದೆ ಸಂಘಕ್ಕೆಂದು ಜೀವ ತೊಯ್ದ ಆತ್ಮಗಳಿಗೆ ಮುಕ್ತಿ ಸಿಗಬಹುದೇನೂ, ಗಾಳಿ ಬಂದಾಗ ತೂರಿಕೊಂಡು ದ್ವೇಷ ಕಾರುತ್ತ ಕೂರಿರುವವರ ನಡುವೆ.

share
ಕಲ್ಲಚ್ಚು ಮಹೇಶ ಆರ್. ನಾಯಕ್
ಕಲ್ಲಚ್ಚು ಮಹೇಶ ಆರ್. ನಾಯಕ್
Next Story
X