ಸಿಎಫ್ ಐ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿ ಹಲ್ಲೆ ಆರೋಪ: ಸಬ್ ಇನ್ಸ್ ಪೆಕ್ಟರ್ ಸೇರಿ 6 ಮಂದಿ ಪೋಲಿಸರ ವಿರುದ್ಧ ಎಫ್ಐಆರ್

ಜಮಖಂಡಿ: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವಿದ್ಯರ್ಥಿ ಸಂಘಟನೆಯ ಕಾರ್ಕಕ್ರಮವೊಂದಕ್ಕೆ ಪೋಲಿಸರು ಅಡ್ಡಿಪಡಿಸಿ ವಿದ್ಯಾರ್ಥಿಗಳ ಮೇಲೆ ಹಲ್ಲೆಗೈದಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿ ಜಮಖಂಡಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹಾಗೂ ಐವರು ಕಾನ್ಸ್ ಟೆಬಲ್ ವಿರುದ್ಧ ಪ್ರಕರಣ ದಾಖಲಾಗಿದೆ.
ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕಳೆದ ವರ್ಷ ಆಗಸ್ಟ್ 17ರಂದು ಜಮಖಂಡಿಯ ಅಂಬೇಡ್ಕರ್ ಭವನದಲ್ಲಿ ಕೋವಿಡ್ ಸದಸ್ಯತ್ವ ಅಭಿಯಾನದ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಿತ್ತು.
' ಕಾರ್ಯಕ್ರಮಕ್ಕೆ ಪೋಲಿಸರು ಏಕಾಏಕಿ ಧಾವಿಸಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿ ವಿದ್ಯಾರ್ಥಿ ನಾಯಕರ ಮೇಲೆ ಹಲ್ಲೆಗೈದಿದ್ದರು ಎಂದು ದೂರಲಾಗಿದೆ.
ಘಟನೆಗೆ ಸಂಭಂಧಿಸಿದಂತೆ ವಿದ್ಯಾರ್ಥಿಗಳು ಪೋಲಿಸರ ಮೇಲೆ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿ ಜಮಖಂಡಿ ಕೋರ್ಟ್ ಮೆಟ್ಟಿಲೇರಿದ್ದರು.
ಇದೀಗ ಜಮಖಂಡಿ ಪೋಲಿಸ್ ಸಬ್ ಇನ್ಸ್ ಪೆಕ್ಟರ್ , 5 ಕಾನ್ಸ್ಟೇಬಲ್ ವಿರುಧ್ದ ಐಪಿಸಿ 1860 (U/s-166,506,34,504,323,324) ಅನ್ವಯ ಪ್ರಕರಣ ದಾಖಲಿಸಲು ನ್ಯಾಯಾಲಯ ಆದೇಶಿಸಿದ್ದು ಅದರಂತೆ ಪ್ರಕರಣ ದಾಖಲಾಗಿದೆ.





