ಮಹಿಳಾ ವಿಮೋಚನೆಗೆ ಅಡ್ಡಿಯಾಗಿರುವ ಅಡೆತಡೆಗಳನ್ನು ತೆಗೆದು ಹಾಕಿ: ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು

ಬೆಂಗಳೂರು, ಜು.9: ದೇಶದಲ್ಲಿ ಮಹಿಳೆಯರ ವಿಮೋಚನೆಗೆ ಅಡ್ಡಿಯಾಗಿರುವ ಅಡೆತಡೆಗಳನ್ನು ನಿರ್ಮೂಲನೆ ಮಾಡುವಂತೆ ಕರೆ ನೀಡಿದ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ನಮ್ಮ ನಾಗರಿಕತೆಯ ತತ್ವಗಳು ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಸಮಾನ ಭಾಗವಹಿಸುವಿಕೆಗೆ ಪ್ರೋತ್ಸಾಹಿಸುತ್ತಿದ್ದರೂ, ಮಹಿಳೆಯರು ತಮ್ಮ ಸಂಪೂರ್ಣ ಸಾಮರ್ವರ್ಥ್ಯವನ್ನು ಇನ್ನೂ ಅರಿತುಕೊಳ್ಳದ ಹಲವಾರು ಕ್ಷೇತ್ರಗಳಿವೆ ಎಂದರು.
ಶನಿವಾರ ನಗರದ ಮೌಂಟ್ ಕಾರ್ಮಲ್ ಕಾಲೇಜಿನ ಪ್ಲಾಟಿನಂ ಜುಬಿಲಿ(ಅಮೃತ ಮಹೋತ್ಸವ) ಆಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರಕಾರಗಳು ನಿರಂತರ ಪ್ರಯತ್ನಗಳ ಮೂಲಕ ಮಹಿಳಾ ಶಿಕ್ಷಣಕ್ಕೆ ಹೆಚ್ಚಿನ ಉತ್ತೇಜನ ನೀಡಬೇಕು. ಅವಕಾಶ ಸಿಕ್ಕಾಗ ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ತಮ್ಮ ಸಾಮರ್ವರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಭಾರತದ ಪ್ರಗತಿಯು ಜಾಗತಿಕ ವೇದಿಕೆಯಲ್ಲಿ ವ್ಯಾಪಕವಾಗಿ ಗುರುತಿಸಲ್ಪಟ್ಟಿದೆ ಎಂದರು.
ಧಾರ್ಮಿಕ ಅಸಹಿಷ್ಣುತೆಯ ವಿಷಯದ ಬಗ್ಗೆ ಪ್ರಸ್ತಾಪಿಸಿದ ವೆಂಕಯ್ಯ ನಾಯ್ಡು, ಧರ್ಮವು ವೈಯಕ್ತಿಕ ವಿಷಯವಾಗಿದೆ ಮತ್ತು ಯಾರಾದರೂ ತಮ್ಮ ಧಮರ್ದ ಬಗ್ಗೆ ಹೆಮ್ಮೆ ಪಡಬಹುದು ಮತ್ತು ಆಚರಿಸಬಹುದು. ಆದರೆ, ಇತರರ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಹಕ್ಕು ಯಾರಿಗೂ ಇಲ್ಲ ಎಂದು ಉಪ ರಾಷ್ಟ್ರಪತಿ ಹೇಳಿದರು.
ಜಾತ್ಯತೀತತೆ ಮತ್ತು ಇತರರ ನಂಬಿಕೆಗಳ ಬಗೆಗಿನ ಸಹಿಷ್ಣುತೆ ಭಾರತೀಯ ನೈತಿಕತೆಯ ಪ್ರಮುಖ ಸಾರವಾಗಿದೆ ಮತ್ತು ವಿರಳ ಘಟನೆಗಳು ಬಹುತ್ವ ಮತ್ತು ಒಳಗೊಳ್ಳುವಿಕೆಯ ಮೌಲ್ಯಗಳಿಗೆ ಭಾರತಕ್ಕಿರುವ ಬದ್ಧತೆಯನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ ಎಂದು ಅವರು ಒತ್ತಿ ಹೇಳಿದರು.
ಶಿಕ್ಷಣದಲ್ಲಿ ಭಾರತದ ಭವ್ಯಪರಂಪರೆಯ ಬಗ್ಗೆ ಉಲ್ಲೇಖಿಸಿದ ಉಪ ರಾಷ್ಟ್ರಪತಿ, ಪ್ರಾಚೀನ ಕಾಲದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಭಾರತ ನೀಡಿದ ಅದ್ಭುತ ಕೊಡುಗೆಯಿಂದಾಗಿ ‘ವಿಶ್ವಗುರು' ಸ್ಥಾನಮಾನವನ್ನು ಗಳಿಸಿದೆ. ಪ್ರಾಚೀನ ಭಾರತದ ಶ್ರೇಷ್ಠ ಮಹಿಳಾ ವಿದ್ವಾಂಸರಾದ ಗಾರ್ಗಿ ಮತ್ತು ಮೈತ್ರೇಯಿ ಅವರ ಹೆಸರನ್ನು ಪ್ರಸ್ತಾಪಿಸಿದ ಅವರು, ಪುರಾತನ ಕಾಲದಿಂದಲೂ ಮಹಿಳಾ ಶಿಕ್ಷಣಕ್ಕೆ ಸ್ಪಷ್ಟವಾದ ಒತ್ತು ನೀಡಲಾಗಿತ್ತು ಎಂದು ಅವರು ತಿಳಿಸಿದರು.
ಶಿಕ್ಷಣದ ಮಹಾನ್ ಪೋಷಕರಾಗಿದ್ದ ಕರ್ನಾಟಕದ ಅನೇಕ ಪ್ರಗತಿಪರ ಆಡಳಿತಗಾರರು ಮತ್ತು ಸುಧಾರಕರಾದ ಅತ್ತಿಮಬ್ಬೆ ಮತ್ತು ಸೋವಲದೇವಿ ಮತ್ತು ಶಿಕ್ಷಣದ ಮೂಲಕ ಮಹಿಳಾ ವಿಮೋಚನೆಗೆ ಒತ್ತು ನೀಡಿದ ವೀರಶೈವ ಚಳವಳಿಯನ್ನು ವೆಂಕಯ್ಯ ನಾಯ್ಡು ಶ್ಲಾಘಿಸಿದರು.
ಶಿಕ್ಷಣದಲ್ಲಿ ಲಿಂಗ ಅಸಮಾನತೆಯನ್ನು ನಿವಾರಿಸುವ ಮೂಲಕ ಬದಲಾವಣೆಯ ವೇಗವರ್ಧಕಗಳಾಗಲು ಸ್ವಾತಂತ್ರ್ಯದ ನಂತರ ಮಹಿಳೆಯರನ್ನು ಸಬಲೀಕರಣಗೊಳಿಸಿದ್ದಕ್ಕಾಗಿ ಮೌಂಟ್ ಕಾರ್ಮಲ್ ಕಾಲೇಜನ್ನು ಶ್ಲಾಘಿಸಿದರು. ಕಾರ್ಯಕ್ಷೇತ್ರಗಳು ಕ್ಷಿಪ್ರಗತಿಯಲ್ಲಿ ಬದಲಾಗುತ್ತಿರುವ ಬಗ್ಗೆ ಗಮನ ಸೆಳೆದ ವೆಂಕಯ್ಯ ನಾಯ್ಡು, ಕೃತಕ ಬುದ್ಧಿಮತ್ತೆಯಿಂದ ಡೇಟಾ ವಿಶ್ಲೇಷಣೆಯವರೆಗಿನ ವಿದ್ಯಾರ್ಥಿಗಳ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಮೂಲಕ ಶಿಕ್ಷಣಕ್ಕೆ ಭವಿಷ್ಯದ ವಿಧಾನವನ್ನು ಅಳವಡಿಸಿಕೊಳ್ಳುವ ಮಹತ್ವವನ್ನು ಒತ್ತಿ ಹೇಳಿದರು. ಪರಿಣಾಮಕಾರಿ ಸಂವಹನ ಕೌಶಲ್ಯಗಳನ್ನು ಹೊಂದಿರುವುದು ಅಷ್ಟೇ ಮುಖ್ಯವಾಗಿದೆ ಎಂದು ಹೇಳಿದರು.
ಹೊರಹೊಮ್ಮುತ್ತಿರುವ ಮತ್ತು ಅಸ್ತಿತ್ವದಲ್ಲಿರುವ ವೃತ್ತಿ ಆಯ್ಕೆಗಳಿಗಾಗಿ ಉದ್ಯೋಗಿಗಳು ಈಗ ವೈವಿಧ್ಯಮಯ ಕ್ಷೇತ್ರಗಳ ವ್ಯಾಪಕ ಜ್ಞಾನವನ್ನು ಹೊಂದಿರಬೇಕು. ಯುವಕರು ತಮ್ಮ ವಿಶೇಷತೆಯಲ್ಲಿ ಆಳವಾದ ಜ್ಞಾನವನ್ನು ಹೊಂದಿರಬೇಕು, ಹಾಗೆಯೇ ಇತರ ವಿಷಯಗಳ ಮೂಲಭೂತ ಅಂಶಗಳಲ್ಲಿ ಸಹ ಬಲಿಷ್ಠವಾಗಿರಬೇಕು. 21 ನೇ ಶತಮಾನದ ಉದ್ಯೋಗ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಲು ವಿವಿಧ ಕ್ಷೇತ್ರಗಳ ಜ್ಞಾನವನ್ನು ಒಟ್ಟುಗೂಡಿಸುವ ಮತ್ತು ಸಂಯೋಜಿಸುವ ಸಾಮಥ್ರ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದರು.
ಬಾಯಿ ಪಾಠದ ಕಲಿಕೆಯಿಂದ ‘ಸಕ್ರಿಯಕಲಿಕೆ’ಯತ್ತ ಸಾಗುವ ಅಗತ್ಯವನ್ನು ಒತ್ತಿ ಹೇಳಿದ ಉಪ ರಾಷ್ಟ್ರಪತಿ, ಶಿಕ್ಷಣ ಸಂಸ್ಥೆಗಳು ನಿರಂತರ ಮೌಲ್ಯ ನಿರ್ಣಯದ ಆಧಾರದ ಮೇಲೆ ಮೌಲ್ಯಮಾಪನವನ್ನು ಅಳವಡಿಸಿಕೊಳ್ಳಬೇಕು. ವಿಷಯಗಳಲ್ಲಿನ ಬಿಗಿತ ಮತ್ತು ಕಟ್ಟುನಿಟ್ಟಿನ ವಿಭಾಗೀಕರಣವನ್ನು ಮುರಿಯಬೇಕು. ಅಂತರ ಶಿಸ್ತೀಯ ಮತ್ತು ಬಹು-ಶಿಸ್ತೀಯ ಕಲಿಕೆ ಭವಿಷ್ಯದ ದಾರಿಯಾಗಿದೆ ಎಂದು ಉಪ ರಾಷ್ಟ್ರಪತಿ ತಿಳಿಸಿದರು.
ನಿಷ್ಪಕ್ಷಪಾತ ಮತ್ತು ಸಮಸಮಾಜವನ್ನು ನಿರ್ಮಿಸಲು ಶಿಕ್ಷಣ ಅತ್ಯಂತ ಶಕ್ತಿಶಾಲಿ ಸಾಧನ ಎಂದು ಹೇಳಿದ ಅವರು, ಶಿಕ್ಷಣ ಸಂಸ್ಥೆಗಳು ಯುವ ಜನರನ್ನು ಸೂಕ್ತವಾದ ಕೌಶಲ್ಯಗಳೊಂದಿಗೆ ಕೇವಲ ಉದ್ಯೋಗಿಗಳನ್ನಾಗಿ ಮಾಡಲು ಸಜ್ಜುಗೊಳಿಸುವುದು ಮಾತ್ರವಲ್ಲದೆ, ನವಭಾರತದ ಬೆಳವಣಿಗೆಯಲ್ಲಿ ವೇಗವರ್ಧಕಗಳಾಗಿಯೂ ಸಜ್ಜುಗೊಳಿಸಬೇಕು ಎಂದು ವೆಂಕಯ್ಯ ನಾಯ್ಡು ಹೇಳಿದರು.
ಇದೇ ಸಂದರ್ಭದಲ್ಲಿ ಮೌಂಟ್ ಕಾರ್ಮಲ್ ಕಾಲೇಜಿನ ಪ್ಲಾಟಿನಂಜುಬಿಲಿ ವರ್ಷದ ಸ್ಮರಣಾರ್ಥವಾಗಿ ಅಂಚೆ ಇಲಾಖೆಯ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಸಮಾರಂಭದಲ್ಲಿ ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್, ಗೋವಾದ ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವ, ಬೆಂಗಳೂರು ನಗರ ವಿವಿ ಉಪ ಕುಲಪತಿ ಡಾ.ಲಿಂಗರಾಜ ಗಾಂಧಿ, ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಡಾ.ಎಸ್.ರಾಜೇಂದ್ರಕುಮಾರ್, ಬೆಂಗಳೂರಿನ ಅರ್ಚ್ ಬಿಷಪ್ ಪೀಟರ್ ಮಚಾಡೊ, ಕಾಲೇಜಿನ ಪ್ರಾಂಶುಪಾಲೆ ಡಾ.ಸಿಸ್ಟರ್ ಅಪರ್ಣಾ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
.jpg)







