ಪಿಎಸ್ಸೈ ನೇಮಕಾತಿಯಲ್ಲಿ ಅಕ್ರಮ ಪ್ರಕರಣ: ಅಮೃತ್ ಪಾಲ್ ಆಪ್ತ ನಾಪತ್ತೆ?

ಸಾಂದರ್ಭಿಕ ಚಿತ್ರ
ಬೆಂಗಳೂರು, ಜು.9: ಪಿಎಸ್ಸೈ ನೇಮಕಾತಿ ಆರೋಪ ಪ್ರಕರಣ ಸಂಬಂಧ ಅಮೃತ್ ಪಾಲ್ ಆಪ್ತನೋರ್ವ ನೋಟಿಸ್ ನೀಡಿದ ಬೆನ್ನಲ್ಲೇ ನಾಪತ್ತೆಯಾಗಿರುವ ಆರೋಪ ಕೇಳಿಬಂದಿದೆ.
ಈಗಾಗಲೇ ಈ ಪ್ರಕರಣ ಸಂಬಂಧ ಹಲವು ಪೊಲೀಸರಿಗೆ ನೋಟಿಸ್ ನೀಡಲಾಗಿದೆ. ಈ ಪೈಕಿ ಅನುಮಾನಿತ ಪಿಎಸ್ಸೈ ಶರೀಫ್ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಎಡಿಜಿಪಿ ದರ್ಜೆಯ ಓರ್ವ ಅಧಿಕಾರಿಯ ಭದ್ರತಾ ಸಿಬ್ಬಂದಿ ಆಗಿದ್ದ ಶರೀಫ್ ಎಂಬುವರು ಈ ಪ್ರಕರಣ ಬೆಳಕಿಗೆ ಬಂದ ನಂತರ ನಾಪತ್ತೆಯಾಗಿದ್ದಾರೆ. ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪಿಎಸ್ಸೈ ಕೆಲಸ ಮಾಡುತ್ತಿದ್ದ ಶರೀಫ್ ಮೇಲೆ ಸಿಐಡಿಗೆ ಅನುಮಾನ ಇದೆ. ಈತ ಹಲವು ಜನರಿಗೆ ಮಧ್ಯವರ್ತಿಯಾಗಿ ಕೆಲಸ ಮಾಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ ಎಂದು ಹೇಳಲಾಗುತ್ತಿದೆ.
ಪಿಎಸ್ಸೈ ಹಗರಣ ಸಂಬಂಧ ಜು.4 ರಂದು ಸಿಐಡಿ ಅಧಿಕಾರಿಗಳು ಅಮೃತ್ ಪಾಲ್ ಅವರನ್ನು ಬಂಧಿಸಿದ್ದರು. ಸದ್ಯ ಅವರು ಸಿಐಡಿ ಕಸ್ಟಡಿಯಲ್ಲಿದ್ದಾರೆ.
Next Story





