ಮಂಗಳೂರು ಸಂಚಾರ ದಕ್ಷಿಣ ಠಾಣೆ ಸ್ಥಳಾಂತರ
ಮಂಗಳೂರು: ನಗರದ ನಾಗುರಿ ಬಳಿಯಿದ್ದ ಮಂಗಳೂರು ಸಂಚಾರ ದಕ್ಷಿಣ ಪೊಲೀಸ್ ಠಾಣೆಯನ್ನು ಜಪ್ಪಿನಮೊಗರು (ಕಡೆಮೊಗರು) ವಿನ ಖಾಸಗಿ ಕಟ್ಟಡಕ್ಕೆ ಶುಕ್ರವಾರದಿಂದ ಸ್ಥಳಾಂತರಿಸಲಾಗಿದೆ ಎಂದು ಪೊಲೀಸ್ ಇಲಾಖೆಯ ಪ್ರಕಟನೆ ತಿಳಿಸಿದೆ.
ಕಂಕನಾಡಿ ನಗರ, ಮಂಗಳೂರು ಗ್ರಾಮಾಂತರ, ಉಳ್ಳಾಲ, ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪಘಾತ ಪ್ರಕರಣಗಳ ಬಗ್ಗೆ ಮಂಗಳೂರು ಸಂಚಾರ ದಕ್ಷಿಣ ಠಾಣೆಯನ್ನು (ದೂ.ಸಂ:೦೮೨೪-೨೨೨೦೮೫೦/ ೯೪೮೦೮೦೫೩೭೧) ಸಂಪರ್ಕಿಬಹುದಾಗಿದೆ ಎಂದು ತಿಳಿಸಿದೆ.
Next Story





