ಆಸ್ಟ್ರೇಲಿಯಾ ವಿರುದ್ಧದ ಕ್ರಿಕೆಟ್ ಪಂದ್ಯಾಟದ ವೇಳೆ ಗಾಲೆ ಸ್ಟೇಡಿಯಂ ಗೋಡೆ ಹತ್ತಿದ ಪ್ರತಿಭಟನಕಾರರು

Photo: Twitter
ಕೊಲಂಬೊ: ಶ್ರೀಲಂಕಾದಲ್ಲಿ ಈಗಾಗಲೇ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟು ತಾರಕಕ್ಕೇರಿದ್ದು, ಪ್ರತಿಭಟನಕಾರರು ಪ್ರಧಾನಮಂತ್ರಿ ರನಿಲ್ ವಿಕ್ರಮಸಿಂಘೆಯವರ ನಿವಾಸಕ್ಕೆ ಬೆಂಕಿ ಹಚ್ಚಿದ್ದರು. ಇದೀಗ ಗಾಲೆ ಕ್ರೀಡಾಂಗಣದಲ್ಲಿ ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ತಂಡಗಳ ಕ್ರಿಕೆಟ್ ಪಂದ್ಯಾಟ ನಡೆಯುತ್ತಿದ್ದ ವೇಳೆ ಸಾವಿರಾರು ಸಂಖ್ಯೆಯ ಪ್ರತಿಭಟನಕಾರರು ಕೋಟೆಯ ಗೋಡೆಗಳ ಮೇಲೆ ಹತ್ತಿ ಪ್ರತಿಭಟಿಸುತ್ತಿದ್ದ ವೀಡಿಯೊಗಳು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.
"ಇಂದು ನಿಸ್ಸಂಶಯವಾಗಿ ದೇಶವು ಪ್ರಕ್ಷುಬ್ಧವಾಗಿದೆ. ಹೊರಗಿನ ಅಂದರೆ ವಿದೇಶಿ ಜನರು ಈ ಕುರಿತು ತಮ್ಮದೇ ಆದ ಅಭಿಪ್ರಾಯ ಹೊಂದಿದ್ದಾರೆ. ನಾವು ಈ ಧ್ವನಿಗಳು ಖಂಡಿತವಾಗಿಯೂ ಕೇಳುತ್ತಿದ್ದೇವೆ. ಅಂದರೆ, ಈಗಲೂ ನಾವಿದನ್ನು ಕೇಳಬಹುದು" ಎಂದು ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಪಂದ್ಯ ಮುಗಿದ ಬಳಿಕ ಹೇಳಿದ್ದಾರೆ. ಊಟದ ವಿರಾಮಕ್ಕೆ ಒಂದು ಗಂಟೆ ಮೊದಲು ಪ್ರತಿಭಟನಾಕಾರರು ಸ್ಟೇಡಿಯಂನ ಗೋಡೆಗಳನ್ನು ಏರಿದಾಗ ಸ್ಮಿತ್ ಕ್ರೀಸ್ ನಲ್ಲಿದ್ದರು. "ನಾನು ಇಂದು ಬೆಳಿಗ್ಗೆ ಅವರನ್ನು ಅಲ್ಲಿ ನೋಡಿದೆ ಆದರೆ ಅದರ ಬಗ್ಗೆ ಹೆಚ್ಚು ಗಮನ ಹರಿಸಲಿಲ್ಲ" ಎಂದು ಸ್ಮಿತ್ ಹೇಳಿದರು.
Public defied police orders and entered the rampart of the Galle Fort with Anti-government banners and posters while Sri Lanka is hosting Australia in the second Test. #AusvsSL pic.twitter.com/UQlBTNKmeL
— champika fernando (@champikafernand) July 9, 2022
Protestors are entering the Galle Fort.#lka #GoHomeGota #July9th #SLvAUS pic.twitter.com/OBtkzVq91U
— Prabodth Yatagama (@PrabodaYatagama) July 9, 2022
Massive protest heading from Rajagiriya to Galle Face. People are making their way still by any means available to them. #ProtestLK #July9protest pic.twitter.com/dXYVBL5IUI
— Marlon Ariyasinghe (@exfrotezter) July 9, 2022
Right outside the Mahinda Rajapaksa Pavilion of Galle International Stadium. pic.twitter.com/NJHUWYRsnL
— Andrew Fidel Fernando (@afidelf) July 9, 2022