ದಕ್ಷಿಣ ಆಫ್ರಿಕಾ: ಗುಂಡಿನ ಚಕಮಕಿಗೆ 14 ಮಂದಿ ಮೃತ್ಯು

Photo:twitter
ಜೋಹಾನ್ಸ್ಬರ್ಗ್: ದಕ್ಷಿಣ ಆಫ್ರಿಕಾದ ಜೋಹಾನ್ಸ್ಬರ್ಗ್ಗೆ ಸಮೀಪವಿರುವ ಸೊವೆಟೊ ಟೌನ್ಶಿಪ್ನಲ್ಲಿರುವ ಬಾರ್ನಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ 14 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ.
"ನಮಗೆ ಮುಂಜಾನೆ 12:30 ರ ಸುಮಾರಿಗೆ ಕರೆ ಮಾಡಲಾಗಿತ್ತು " ಎಂದು ಶನಿವಾರ ಹಾಗೂ ರವಿವಾರ ರಾತ್ರಿಯ ಗುಂಡಿನ ದಾಳಿಯ ನಂತರ ಪೊಲೀಸ್ ಲೆಫ್ಟಿನೆಂಟ್ ಎಲಿಯಾಸ್ ಮಾವೆಲಾ ಹೇಳಿದರು.
"ನಾವು ಸ್ಥಳಕ್ಕೆ ತಲುಪಿದಾಗ 12 ಜನರು ಸಾವನ್ನಪ್ಪಿದ್ದಾರೆ ಎಂದು ದೃಢಪಟ್ಟಿತು" ಎಂದು ಮಾವೆಲಾ ಹೇಳಿದರು.
ಗಾಯಗೊಂಡಿರುವ ಇತರ 11 ಮಂದಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಇಬ್ಬರು ನಂತರ ಸಾವನ್ನಪ್ಪಿದರು ಈ ಸಂಖ್ಯೆ 14 ಕ್ಕೆ ಏರಿದೆ ಎಂದು ಮಾವೆಲಾ ಹೇಳಿದರು.
Next Story