ಡಾ. ವೀರೇಂದ್ರ ಹೆಗ್ಗಡೆಗೆ ರಾಜ್ಯಸಭಾ ಸದಸ್ಯತ್ವ ದೊರಕಿದ್ದು ಸಮಾಜಕ್ಕೆ ಹೆಮ್ಮೆ: ಡಾ.ರಾಜೇಂದ್ರ ಕುಮಾರ್

ಮಂಗಳೂರು: ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ರಾಜ್ಯಸಭೆಗೆ ನಾಮಕರಣ ಮಾಡಿರುವುದು ಸಮಾಜಕ್ಕೆ ಹೆಮ್ಮೆ ಹಾಗೂ ಸಂಭ್ರಮದ ವಿಚಾರ. ಸದಾ ಸಮಾಜಮುಖಿ ಸೇವಾ ಕಾರ್ಯಗಳ ಮೂಲಕ ಗಮನ ಸೆಳೆದಿರುವ ಹೆಗ್ಗಡೆಯವರನ್ನು ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಗುರುತಿಸಿರುವುದು ಅಭಿನಂದನಾರ್ಹ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರು ಹಾಗೂ ಜೈನ ಧರ್ಮ ಜೀರ್ಣೋದ್ದಾರಕ ಸಂಘ ಕಾರ್ಕಳ ಇದರ ಅಧ್ಯಕ್ಷರಾದ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದ್ದಾರೆ.
ಅವರು ಧರ್ಮಸ್ಥಳದಲ್ಲಿ ರವಿವಾರ ಜೈನ ಧರ್ಮ ಜೀರ್ಣೋದ್ದಾರಕ ಸಂಘ ಕಾರ್ಕಳ ಹಾಗೂ ಕಾರ್ಕಳ ಜೈನ ಸಮಾಜದ ವತಿಯಿಂದ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಅಭಿನಂದಿಸಿ ಮಾತನಾಡಿದರು. ಜೈನ ಸಮಾಜಕ್ಕೆ ಹಾಗೂ ಧರ್ಮ ಸಮನ್ವಯತೆಗೆ ವೀರೇಂದ್ರ ಹೆಗ್ಗಡೆ ಅವರ ಕೊಡುಗೆ ಅಪಾರವಾದದು. ಅವರು ಚರ್ತುದಾನದೊಂದಿಗೆ ಧರ್ಮ ಜಾಗೃತಿ, ಧರ್ಮ ಪ್ರಚಾರ ಮಾಡುತ್ತಾ ಶಿಕ್ಷಣ, ಆರೋಗ್ಯ, ಮಹಿಳಾ ಸಶಕ್ತೀಕರಣದ ಮೂಲಕ ಸಾಮಾಜಿಕ ಪರಿವರ್ತನೆಯ ಕ್ರೀಯಶೀಲ ಕಾರ್ಯಕ್ರಮಗಳಿಂದ ಜನಾನುರಾಗಿ ಯಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಜೈನ ಧರ್ಮ ಜೀರ್ಣೋದ್ದಾರಕ ಸಂಘ ಕಾರ್ಕಳ ಇದರ ಕಾರ್ಯದರ್ಶಿ ಎಂ.ಕೆ.ವಿಜಯ ಕುಮಾರ್ ,ಜೊತೆ ಕಾರ್ಯದರ್ಶಿಗಳಾದ ಮಹಾವೀರ ಹೆಗ್ಡೆ ಅಂಡಾರು, ಮೋಹನ್ ಪಡಿವಾಳ್ , ಹಾಗೂ ಜೈನ ಧರ್ಮದ ಪ್ರಮುಖರಾದ ಪುಷ್ಪರಾಜ್ ಜೈನ್ , ಅನಂತರಾಜ ಪೂವಣಿ , ಮಹಾವೀರ ಜೈನ್ , ಪ್ರಭತ್ ಕುಮಾರ್, ಡಾ.ಮಹಾವೀರ್, ಪ್ರಕಾಶ್ ಜೈನ್ ನಾರಾವಿ, ಹೇಮಚಂದ್ರ ಜೈನ್, ಸುನಿಲ್ ಕುಮಾರ್ ಬಜಗೋಳಿ , ಶಾಂತಿರಾಜ್ ಜೈನ್ ಶಿರ್ಲಾಲು ಮೊದಲಾದವರು ಉಪಸ್ಥಿತರಿದ್ದರು.







