ಪ್ಲಾಸ್ಟಿಕ್ ನಿಷೇಧ: 10 ದಿನದಲ್ಲಿ 5 ಲಕ್ಷ ರೂ.ಗಳಿಗಿಂತ ಅಧಿಕ ದಂಡ ಸಂಗ್ರಹಿಸಿದ ಬಿಬಿಎಂಪಿ

ಬೆಂಗಳೂರು, ಜು.11: ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವ ಮಾರಾಟ ಮಳಿಗೆಗಳು ಹಾಗೂ ಪ್ಲಾಸ್ಟಿಕ್ ಉತ್ಪಾದಿಸುತ್ತಿರುವ ಘಟಕಗಳ ಮೇಲೆ ಜು.1ರಿಂದ ಜು.10ವರೆಗೆ ತಪಾಸಣೆ ನಡೆಸಿ ಒಟ್ಟು 1,380.8 ಕೆ.ಜಿ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನ ಜಪ್ತಿ ಮಾಡಲಾಗಿದ್ದು, 5,97,800 ರೂ. ದಂಡವನ್ನು ವಿಧಿಸಲಾಗಿದೆ.
ಬಿಬಿಎಂಪಿ ವ್ಯಾಪ್ತಿಯ 8 ವಲಯಗಳಲ್ಲಿ ಬಿಬಿಎಂಪಿ ಕಿರಿಯ ಆರೋಗ್ಯ ಪರಿವೀಕ್ಷಕರು, ಮಾರ್ಷಲ್‍ಗಳ ಮೇಲ್ವಿಚಾರಕರು ಹಾಗೂ ಮಾರ್ಷಲ್‍ಗಳ ತಂಡವು ಅನಿರೀಕ್ಷಿತವಾಗಿ ಸಗಟು ವ್ಯಾಪಾರ ಮಳಿಗೆಗಳು, ಅಂಗಡಿಗಳು, ಹೊಟೇಲ್ ಉದ್ದಿಮೆ, ಪ್ಲಾಸ್ಟಿಕ್ ಉತ್ಪಾದಿಸುವ ಉದ್ದಿಮೆಗಳಿಗೆ ಭೇಟಿ ನೀಡಿ ಪ್ಲಾಸ್ಟಿಕ್ ಜಪ್ತಿ ಮಾಡುವುದರ ಜೊತೆಗೆ ದಂಡ ವಿಧಿಸಿ ಮತ್ತೊಮ್ಮೆ ಪ್ಲಾಸ್ಟಿಕ್ ಬಳಕೆ ಮಾಡದಂತೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ತಿಳಿಸಿದೆ.
Next Story





