ಜು.12ರಂದು ಶಾಲೆಗಳಿಗೆ ರಜೆ ಇಲ್ಲ: ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ

ಮಂಗಳೂರು, ಜು.11: ಹವಾಮಾನ ಇಲಾಖೆಯು ಜು.12(ಮಂಗಳವಾರ)ರಂದು ದ.ಕ.ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ. ಹಾಗಾಗಿ ಜು.12ರಂದು ಜಿಲ್ಲೆಯ ಅಂಗನವಾಡಿ ಮತ್ತು ಪ್ರಾಥಮಿಕ, ಪ್ರೌಢಶಾಲೆಗಳು ಎಂದಿನಂತೆ ಕಾರ್ಯಾಚರಿಸಲಿವೆ ಎಂದು ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.
ಭಾರೀ ಮಳೆಯ ಹಿನ್ನೆಲೆಯಲ್ಲಿ ಜು. 5ರಿಂದ ಶಾಲಾ ಕಾಲೇಜುಗಳಿಗೆ ನಿರಂತರವಾಗಿ ರಜೆ ನೀಡಲಾಗಿತ್ತು. ಆದರೆ ಇಂದು ಮಳೆ ಬಿಡುವು ಪಡೆದಿದ್ದು, ಎಂದಿನಂತೆ ಕಾಲೇಜುಗಳು ಕೂಡ ತೆರೆದಿವೆ. ಆದರೆ ಮುಂಜಾಗ್ರತಾ ಕ್ರಮವಾಗಿ ಇಂದು ಅಂಗನವಾಡಿ ಮತ್ತು ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿತ್ತು.
ಮಂಗಳವಾರ ಎಂದಿನಂತೆ ಅಂಗನವಾಡಿ ಮತ್ತು ಪ್ರಾಥಮಿಕ ಶಾಲೆಗಳು ಕೂಡ ತೆರೆಯಲಿವೆ. ಆದರೆ ಪ್ರಕೃತಿ ವಿಕೋಪ ಮತ್ತಿತರ ಸಮಸ್ಯೆ ಸೃಷ್ಟಿಯಾದರೆ ಡಿಡಿಪಿಐ, ಜಿಪಂ ಸಿಇಒ, ಡಿಸಿ ಕಚೇರಿಯಿಂದ ಅನುಮತಿ ಪಡೆದು ಸ್ಥಳೀಯವಾಗಿ ತೀರ್ಮಾನ ತೆಗೆದುಕೊಳ್ಳಬಹುದಾಗಿದೆ ಎಂದು ಡಿಸಿ ತಿಳಿಸಿದ್ದಾರೆ.
Next Story





