ಕೋಟ: ತಾಯಿ ಊಟ ಬಡಿಸದಕ್ಕಾಗಿ ಕೋಪಗೊಂಡ ಮಗ ಆತ್ಮಹತ್ಯೆ
ಕೋಟ : ತಾಯಿ ಊಟ ಬಡಿಸದ ಕಾರಣಕ್ಕಾಗಿ ಕೋಪಗೊಂಡ ಮಗ ನೇಣಿಗೆ ಶರಣಾದ ಘಟನೆ ಜು.11ರಂದು ಮಧ್ಯಾಹ್ನ ವೇಳೆ ಕಾರ್ಕಡ ಎಂಬಲ್ಲಿ ನಡೆದಿದೆ.
ಮೃತರನ್ನು ಕಾರ್ಕಡ ನಿವಾಸಿ ಲಕ್ಷ್ಮಿ ಎಂಬವರ ಮಗ, ಕೋಟ ವಿವೇಕ ಹೈಸ್ಕೂಲಿನಲ್ಲಿ 9ನೇ ತರಗತಿಯ ವಿದ್ಯಾರ್ಥಿ ನಾಗೇಂದ್ರ (14) ಎಂದು ಗುರುತಿಸಲಾಗಿದೆ.
ಲಕ್ಷ್ಮೀ ಕಾರ್ಕಡದಲ್ಲಿ ವೀರಭದ್ರ ಕ್ಯಾಂಟೀನ್ ನಡೆಸಿಕೊಂಡಿದ್ದು, ಶಾಲಾ ರಜೆ ಹಿನ್ನೆಲೆಯಲ್ಲಿ ನಾಗೇಂದ್ರ ಕಾರ್ಕಡ ಶಾಲಾ ಮೈದಾನಲ್ಲಿ ಆಡಲು ಹೋಗಿದ್ದ ಎನ್ನಲಾಗಿದೆ. ಮಧ್ಯಾಹ್ನ ಊಟಕ್ಕೆಂದು ಮನೆಗೆ ಬಂದವನು ತಾಯಿಯಲ್ಲಿ ಊಟ ಬಡಿಸಲು ಹೇಳಿದ್ದನು. ಆದರೆ ಲಕ್ಷ್ಮೀಗೆ ಕ್ಯಾಂಟೀನ್‌ನಲ್ಲಿ ಗ್ರಾಹಕರಿದ್ದುದರಿಂದ ನಾಗೇಂದ್ರನಿಗೆ ಮನೆಗೆ ಹೋಗಿ ಊಟ ಹಾಕಿಕೊಂಡು ಊಟ ಮಾಡಲು ಹೇಳಿದ್ದರೆನ್ನಲಾಗಿದೆ. ಹಠ ಸ್ವಭಾವದ ನಾಗೇಂದ್ರ, ಇದರಿಂದ ಸಿಟ್ಟುಗೊಂಡು ಮನೆಯಲ್ಲಿ ಬಟ್ಟೆ ಹಾಕಲು ಸಿಟೌಟ್‌ನಲ್ಲಿ ಕಟ್ಟಿದ ಹಗ್ಗಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿ ದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





