ಸಾವಿನಲ್ಲೂ ಸಾರ್ಥಕತೆ ಮೆರೆದ ಬಾಲಕಿ: ಝೀರೋ ಟ್ರಾಫಿಕ್ ನಲ್ಲಿ ಧಾರವಾಡದಿಂದ ಬೆಳಗಾವಿಗೆ ತೆರಳಿತು ಜೀವಂತ ಹೃದಯ

ಧಾರವಾಡ: ಮೆದುಳು ನಿಷ್ಕ್ರೀಯಗೊಂಡ ಹಿನ್ನೆಲೆಯಲ್ಲಿ 15 ವರ್ಷದ ಬಾಲಕಿಯ ಅಂಗಾಂಗವನ್ನು ಆಕೆಯ ಪೋಷಕರು ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ. ಅಷ್ಟೇ ಅಲ್ಲದೆ ಬಾಲಕಿಯ ಹೃದಯವನ್ನು ಧಾರವಾಡದಿಂದ ಬೆಳಗಾವಿಯ ಕೆಎಲ್ಇಎಸ್ ಆಸ್ಪತ್ರೆಗೆ ಸುರಕ್ಷಿತವಾಗಿ ತರಲಾಯಿತು.
ಉತ್ತರ ಕನ್ನಡ ಮೂಲದ ಬಾಲಕಿ ಅಪಘಾತದಲ್ಲಿ ಗಾಯಗೊಂಡು ಧಾರವಾಡ ಎಸ್‍ಡಿಎಂ ಆಸ್ಪತ್ರೆಗೆ ದಾಖಲಾಗಿದ್ದಳು. ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಬಾಲಕಿ ಮಿದುಳು ನಿಷ್ಕ್ರಿಯವಾಗಿತ್ತು. ಹೀಗಾಗಿ ಪೋಷಕರು ತಮ್ಮ ಮಗಳ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿಗೆ ಸೂಚಿಸಿದ್ದರು.
ಇದೇ ಸಮಯಕ್ಕೆ ಬೆಳಗಾವಿಯ ಕೆಎಲ್‍ಇ ಆಸ್ಪತ್ರೆಯಲ್ಲಿ ಯುವಕನೊಬ್ಬ ಹೃದ್ರೋಗದಿಂದ ಬಳಲುತ್ತಿದ್ದ. ಬಾಲಕಿಯ ಪೋಷಕರ ಸಮ್ಮತಿ ಮೇರೆಗೆ ಹೃದಯ ಕಸಿ ಮಾಡಲು ಒಪ್ಪಿಗೆ ನೀಡಿದ್ದರು. ಹೀಗಾಗಿ ಧಾರವಾಡದ ಎಸ್‍ಡಿಎಂ ಆಸ್ಪತ್ರೆಯಿಂದ ಬೆಳಗಾವಿಯ ಕೆಎಲ್‍ಇ ಆಸ್ಪತ್ರೆಗೆ ಝೀರೊ ಟ್ರಾಫಿಕ್‍ನಲ್ಲಿ 50 ನಿಮಿಷಗಳ ಅಂತರದಲ್ಲಿ ಬಾಲಕಿಯ ಹೃದಯವನ್ನು ತರಲಾಯಿತು.
ಬಾಲಕಿಯ ಹೃದಯ ಕಸಿ ಕೆಎಲ್‍ಇ ಆಸ್ಪತ್ರೆಯ ಹೃದಯ ಶಸ್ತ್ರಚಿಕಿತ್ಸೆ ತಜ್ಞ ಡಾ.ರಿಚರ್ಡ್ ಸಾಲ್ಡಾನಾ ನೇತೃತ್ವದಲ್ಲಿ ಮೂರು ಜನರ ತಂಡದೊಂದಿಗೆ 6 ಗಂಟೆಗಳ ಕಾಲ ನಡೆದಿದೆ.
#Dharwad #Hubballi a live heart taken from SDM hospital Dharwad to KLE hospital in Belagavi in zero traffic. Donor from Uttar Kannada district. Kidney, liver is also donated taken to different hospitals. @XpressBengaluru @Cloudnirad @ramupatil_TNIE @amitatexpress @Arunkumar_TNIE pic.twitter.com/Tvl2xFOXqi
— Mallikarjun Hiremath_TNIE (@HiremathTnie) July 11, 2022







