ಪ್ರಥಮ ಪಿಯು ದಾಖಲಾತಿಗೆ ಅವಧಿ ವಿಸ್ತರಣೆ

ಬೆಂಗಳೂರು, ಜು.11: ಸಿಬಿಎಸ್‍ಇ ಹಾಗೂ ಐಸಿಎಸ್‍ಸಿ ಬೋರ್ಡ್‍ಗಳಲ್ಲಿ 10ನೇ ತರಗತಿ ಫಲಿತಾಂಶ ಪ್ರಕಟಣೆಯು ತಡವಾಗುತ್ತಿರುವ ಹಿನ್ನೆಲೆಯಲ್ಲಿ ಅನೇಕ ಪೋಷಕರು ಹಾಗೂ ವಿದ್ಯಾರ್ಥಿಗಳು ದಾಖಲಾತಿ ದಿನಾಂಕವನ್ನು ವಿಸ್ತರಿಸಲು ಮನವಿ ಮಾಡಿರುತ್ತಾರೆ. ಹಾಗಾಗಿ ಪ್ರಥಮ ಪಿಯುಸಿ ದಾಖಲಾತಿ ದಿನಾಂಕವನ್ನು ವಿಸ್ತರಿಸಿ ಪದವಿ ಪೂರ್ವ ಶಿಕ್ಷಣ ಇಲಾಖೆ ಆದೇಶಿಸಿದೆ.
ದಂಡ ಶುಲ್ಕವಿಲ್ಲದ ದಾಖಲಾತಿಗೆ, ವಿಸ್ತರಿಸಿದ ಕೊನೆಯ ದಿನಾಂಕವನ್ನು ಜು.30, ವಿಳಂಬ ದಾಖಲಾತಿ ರೂ.670 ದಂಡ ಶುಲ್ಕದೊಂದಿಗೆ ವಿಸ್ತರಿಸಿದ ಕೊನೆಯ ದಿನಾಂಕವನ್ನು ಆ.6ರ ವರೆಗೆ, ವಿಶೇಷ ದಂಡ ಶುಲ್ಕ 2,890ರೂ. ಗಳೊಂದಿಗೆ ದಾಖಲಾತಿಗೆ ವಿಸ್ತರಿಸಿದ ಕೊನೆಯ ದಿನಾಂಕವನ್ನು ಆ.12ರ ವರೆಗೆ ವಿಸ್ತರಿಸಿದೆ ಎಂದು ಪ್ರಕಟಣೆ ತಿಳಿಸಿದೆ.
Next Story





