ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಹೊತ್ತಿ ಉರಿದ ಕಾರು: ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು

ಬೆಳ್ತಂಗಡಿ, ಜು.12: ಮಂಗಳೂರಿನಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ಕಾರೊಂದು ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಹೊತ್ತಿ ಉರಿದು ಭಸ್ಮವಾದ ಘಟನೆ ಜು.11ರಂದು ರಾತ್ರಿ ನಡೆದಿರುವುದು ವರದಿಯಾಗಿದೆ. ಅಪಾಯದ ಮುನ್ಸೂಚನೆ ಅರಿತ ಕಾರಿನ ಪ್ರಯಾಣಿಕರು ಕ್ಷಣಾರ್ಧದಲ್ಲಿ ಹೊರಗಿಳಿದು ಬಚಾವ್ ಆಗಿದ್ದಾರೆ.
ಕಾರಿನಲ್ಲಿದ್ದವರು ಮಂಗಳೂರಿನ ಜೋಕಟ್ಟೆಯಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರೆನ್ನಲಾಗಿದೆ. ಕಾರು ಕಳೆದ ರಾತ್ರಿಯ ವೇಳೆ ಚಾರ್ಮಾಡಿ ಘಾಟ್ ನ ಅಣ್ಣಪ್ಪ ಸ್ವಾಮಿ ದೇವಸ್ಥಾನ ಬಳಿ ಚಲಿಸುತ್ತಿದ್ದ ವೇಳೆ ಆಕಸ್ಮಿಕ ಡೀಸಲ್ ಟ್ಯಾಂಕ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದು ಅರಿವಿಗೆ ಬರುತ್ತಿದ್ದ ಚಾಲಕ ಕಾರನ್ನು ರಸ್ತೆ ಬದಿಗೆ ನಿಲ್ಲಿಸಿದ್ದು, ಪ್ರಯಾಣಿಕರು ತಕ್ಷಣ ಕಾರಿನಿಂದ ಕೆಳಗಿಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯ ಬಗ್ಗೆ ಚಾರ್ಮಾಡಿ ಸಮಾಜ ಸೇವಕ ಹಸನಬ್ಬರಿಗೆ ವಿಷಯ ತಿಳಿಸಿದ ಅವರು ಕೂಡಲೇ ಬಣಕಲ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಲ್ಲದೆ, ವಾಹನದಲ್ಲಿದ್ದವರಿಗೆ ಅಗತ್ಯ ನೆರವನ್ನು ಒದಗಿಸಿದ್ದಾರೆ
ಘಟನಾ ಸ್ಥಳಕ್ಕೆ ಬಣಕಲ್ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.